This is the title of the web page
This is the title of the web page
Local News

ಸ್ಮಶಾನ ಒತ್ತುವರೆ ನಿಲ್ಲಿಸುವಲ್ಲಿ ಸ್ಥಳೀಯ ಸರ್ಕಾರ ವಿಫಲ


ರಾಯಚೂರು ನಗರದಲ್ಲಿರುವ ಸ್ಮಶಾನಗಳ ಸಂರಕ್ಷಣೆ ಮಾಡುವಲ್ಲಿ ಜಿಲ್ಲಾಡಳಿತ,ನಗರಸಭೆ ಹಾಗೂ ಜನಪ್ರತಿನಿಧಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ರುದ್ರ ಭೂಮಿಗಳ ಸಂರಕ್ಷಣ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಜಯ ಬಾಸ್ಕರ ಇಟಿಗಿ ಹೇಳಿದರು.

ಜನರು ಸತ್ತರೆ ಗೌರವಯುಕ್ತವಾಗಿ ಅಂತ್ಯಕ್ರಿಯೆಯನ್ನು ಮಾಡಲು ಅಸಹಾಯಕ ಸ್ಥಿತಿ ನಗರದಲ್ಲಿ ನಿರ್ಮಾಣವಾಗಿದೆ. ನಗರದ ಸುತ್ತಮುತ್ತ ಇರುವ ರುದ್ರ ಭೂಮಿಗಳ ಸ್ಮಶಾನಗಳು ಸರಿಯಾದ ಸಂರಕ್ಷಣೆ ಇಲ್ಲದೆ ಪ್ರಭಾವಿ ವ್ಯಕ್ತಿಗಳ ಕೈವಶವಾಗುತ್ತಿವೆ ಎಂದು ದೂರಿದರು. ಸರ್ವೆ ನಂಬರ್ 929/*/2 ರಲ್ಲಿ 15 ಎಕರೆ ಸಾರ್ವಜನಿಕ ಸ್ಮಶಾನಕ್ಕಾಗಿ ಕಾಯ್ದಿಸಿದ ಜಗವನ್ನು ಅದರ ಸುತ್ತ ಗೋಡೆಯನ್ನು ನಿರ್ಮಿಸಿ ಮೂಲಭೂತಕರೆಗಳನ್ನು ಮಾಡಬೇಕು. ಹಾಗೂ ನಗರಸಭೆಯಿಂದ ಸಿಬ್ಬಂದಿಯನ್ನು ನೇಮಿಸಬೇಕು. ಬಡ ಜನರು ಮರಣ ಹೊಂದಿದ್ದರೆ ಅವರ ಅಂತ ಕ್ರಿಯೆ ಮಾಡಲು ಕೈಲಾಸ ಯಾತ್ರೆ ವಾಹನವನ್ನು ಉಚಿತವಾಗಿ ವ್ಯವಸ್ಥೆ ಮಾಡಬೇಕು.

ನಗರದ ಬೇರೆ ಬೇರೆ ಕಡೆ ಇರುವ ವೃದ್ಧರ ಭೂಮಿಗಳನ್ನು ನಗರ ಸಭೆ ಮತ್ತು ಜನಪ್ರತಿನಿಧಿಗಳು ರುದ್ರ ಭೂಮಿ ಜಾಗವನ್ನು ತಡೆಗೋಡೆ ಮಾಡಬೇಕು. ಅ ಭೂಮಿ ಖಾಸಗಿಯಾಗಿದ್ದರೆ ಜಾಗವನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಭೂಮಿಯನ್ನು ಖರೀದಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಒತಾಯಿಸಿದರು. ಜಲಾಲ್ ನಗರ, ರೇಡಿಯೋ ಸ್ಟೇಷನ್, ಆಶಾಪುರ ರೋಡ್, ಜಲಾಲ್ ಸಾಬ್ ಗುಡ್ಡ , ನಗರದ ವಿವಿಧ ಭಾಗಗಳಲ್ಲಿರುವ ರುದ್ರ ಭೂಮಿಗಳನ್ನು ಸಂರಕ್ಷಣೆ ಮಾಡಿ ಮಾನವ ಹೊಂದಿದವರ ಅಂತ್ಯಕ್ರಿಯೆಯನ್ನು ಗೌರವಯುತವಾಗಿ ಮಾಡಬೇಕೆಂದು ಆಗ್ರಹಿಸಿದರು.


[ays_poll id=3]