K2kannadanews.in
Optical illusions : ಇಲ್ಲಿ ಕಾಣಿಸುತ್ತಿರುವ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳಲ್ಲಿ ಹಲವು ಅಂಶಗಳಿದ್ದು, ಇದರಲ್ಲಿ ನಮ್ಮ ಕಣ್ಣು ಮೊದಲು ಏನನ್ನು ಗ್ರಹಿಸುತ್ತದೆ ಅದು ನಮ್ಮ ವ್ಯಕ್ತಿತ್ವವಾಗಿರುತ್ತದೆ. ಈ ಚಿತ್ರವನ್ನು ಒಟ್ಟಾರೆ ನಮ್ಮನ್ನು ನಾವು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಗಿಡ, ಸಿಂಹ, ಗೊರಿಲ್ಲಾ ಹಾಗೂ ಮೀನು ಈ ನಾಲ್ಕು ಅಂಶಗಳಿರುವ ಚಿತ್ರವು ನಿಮ್ಮ ಸಾಮರ್ಥ್ಯ ಹಾಗೂ ವೀಕ್‌ನೆಸ್ ಅನ್ನ ತಿಳಿಸುತ್ತವೆ. ಹಾಗಾದರೆ ನಿಮ್ಮ ಕಣ್ಣಿಗೆ ಮೊದಲು ಕಂಡಿದ್ದೇನು ಹೇಳಿ.
ನಿಮಗೆ ಮೊದಲು ಕಂಡ ಚಿತ್ರ ಹೇಗೆ ನಿಮ್ಮ ವ್ಯಕ್ತಿತ್ವ ತಿಳಿಸಿತ್ತದೆ ಗೊತ್ತಾ.. ಬನ್ನಿ ನೋಡೋಣ..
ನಿಮಗೆ ಮೊದಲು ಕಂಡಿದ್ದು ಮೀನು ಅಂದ್ರೆ : ನೀವು ಕಲ್ಲನ್ನೂ ಮಾತನಾಡಿಸುವ ಗುಣದವರು, ನಿಮ್ಮ ಸಂಪರ್ಕ ಅಪಾರ. ನೀವು ಭೇಟಿಯಾಗುವ ಯಾರೊಂದಿಗಾದರೂ ನೀವು ಉತ್ತಮ ಬಾಂಧವ್ಯ ಹೊಂದಿರುತ್ತೀರಿ. ನಿಮ್ಮ ಜೀವನ ಪ್ರೀತಿ ಇತರರಿಗೆ ಸ್ಫೂರ್ತಿ ಎಂಬುದು ಸುಳ್ಳಲ್ಲ. ನೀವು ಬೇರೆಯವರಿಗೆ ತೋರಿಸುವುದು ನಿಸ್ವಾರ್ಥ ಪ್ರೀತಿ. ಜೀವನವನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳುವುದು ನಿಮ್ಮ ಸಾಮರ್ಥ್ಯ.
ನಿಮಗೆ ಮೊದಲು ಕಂಡಿದ್ದು ಗೊರಿಲ್ಲಾ ಅಂದ್ರೆ : ನೀವು ಸ್ವಾಭಿಮಾನದ ಸವಾಲುಗಳನ್ನು ಎದುರಿಸುತ್ತಿರಬಹುದು. ಸಾಧಿಸಲು ಸಾಧ್ಯವಾಗದೇ ಇರುವುದರ ಮೇಲೆ ನೀವು ಹೆಚ್ಚು ಗಮನ ಹರಿಸುತ್ತೀರಿ. ಪೂರೈಸಲು ಸಾಧ್ಯವಾಗದ ಬಯಕೆಗಳನ್ನೇ ನೀವು ಹೊಂದಿರುತ್ತೀರಿ. ನೀವು ಬೇರೆಯವರ ಸಣ್ಣ ತಪ್ಪುಗಳನ್ನೂ ಕ್ಷಮಿಸುವುದಿಲ್ಲ. ಕೆಲವೊಮ್ಮೆ ದೇಹ ಹಾಗೂ ಮನಸ್ಸಿನ ವಿಶ್ರಾಂತಿಯನ್ನು ಕಡೆಗಣಿಸುತ್ತೀರಿ. ಕಲಿಯುವ ನಿರಂತರ ಬಯಕೆಯು ನಿಮ್ಮನ್ನು ಇತರರಿಂದ ದೂರವಾಗುವಂತೆ ಮಾಡಬಹುದು. ನೀವು ಗಮನ ಹರಿಸುವ ಯಾವುದೇ ವಿಚಾರಗಳ ಬಗ್ಗೆ ನೀವು ಸಾಕಷ್ಟು ಜ್ಞಾನ ಹೊಂದಿರುತ್ತೀರಿ. ಕೆಲವೊಮ್ಮೆ ಜ್ಞಾನ ಬಾಯಾರಿಕೆಯು ನೀವು ದುರಂಹಕಾರಿಯಾಗಲು ಕಾರಣವಾಗಬಹುದು. ಬೇರೆಯವರನ್ನು ಕಡೆಗಣಿಸುವ ವ್ಯಕ್ತಿಯನ್ನು ಯಾರೂ ಮೆಚ್ಚುವುದಿಲ್ಲ ಎಂಬುದನ್ನು ಎಲ್ಲರೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ನಿಮ್ಮದೇ ದೃಷ್ಟಿಕೋನ, ಅಹಂ ಭಾವ, ಜನರನ್ನು ಕಡೆಗಣಿಸುವುದು ಇದೇ ನಿಮ್ಮ ದೊಡ್ಡ ವೀಕ್‌ನೆಸ್. ಇದೇ ನಿಮ್ಮ ಬದುಕಿಗೆ ಮಾರಕವಾಗುತ್ತದೆ.
ನಿಮಗೆ ಮೊದಲು ಕಂಡಿದ್ದು ಸಿಂಹ ಅಂದ್ರೆ : ನೀವು ಯಾವುದೇ ವಿಚಾರದ ಬಗ್ಗೆಯೂ ಅತಿಯಾಗಿ ಯೋಚಿಸುತ್ತಾ ಸಮಯ ಕಳೆಯುವವರಲ್ಲ. ಜನರ ಬಗ್ಗೆ ನೀವು ಸದಾ ಎಚ್ಚರದಿಂದ ಇರುತ್ತೀರಿ. ಜೀವನವನ್ನ ಸಾಹಸದಿಂದ ಕಳೆಯುವುದು ನಿಮಗೆ ಇಷ್ಟವಾಗುತ್ತದೆ. ಆದರೆ ಕೆಲವೊಮ್ಮೆ ನಿಮ್ಮ ಅತಿಯಾದ ಸಾಹಸವನ್ನು ಆತ್ಮೀಯರನ್ನೂ ಮರೆಯುವಂತೆ ಮಾಡಬಹುದು. ಬೇರೆಯವರ ಭಾವನೆಗಳಿಗೆ ಬೆಲೆ ಕೊಡದೇ ಅವರಿಗೆ ನೋವು ನೀಡಬಹುದು. ಮಹತ್ವಾಕಾಂಕ್ಷೆ ಹೊಂದಿರುವ ನೀವು ಅದನ್ನು ಸಾಧಿಸಲು ಗುರಿ ಹೊಂದಿಸಬೇಕು. ನಿಮ್ಮ ಗುರಿಗಳನ್ನು ಅಥವಾ ನಿಮ್ಮ ಆಸೆಯನ್ನು ಪೂರೈಸಿಕೊಳ್ಳಲು ಬೇರೆಯವರನ್ನು ನಿರ್ಲಕ್ಷ್ಯ ಮಾಡುವುದು ನಿಮ್ಮ ವೀಕ್‌ನೆಸ್.
ನಿಮಗೆ ಮೊದಲು ಕಂಡಿದ್ದು ಗಿಡ ಆದ್ರೆ : ನೀವು ತಾರ್ಕಿಕ ಚಿಂತಕರು ಎಂದರ್ಥ. ನಿಮ್ಮ ಸುತ್ತಲಿನ ಜಾಗದಲ್ಲೂ ಅರ್ಥವನ್ನು ಹುಡುಕುತ್ತೀರಿ. ನಿಮ್ಮ ಬುದ್ಧಿಶಕ್ತಿಯ ಮೇಲೆ ಹೆಚ್ಚು ಅವಲಂಬಿತರಾಗುತ್ತೀರಿ. ಅಪರೂಪವಾಗಿ ಭಾವನೆಗಳನ್ನು ಮುನ್ನಡೆಸಲು ಬಿಡುತ್ತೀರಿ. ಈ ಗುಣಲಕ್ಷಣವು ಕೆಲಸದ ವಾತಾವರಣದಲ್ಲಿ ವಿಶೇಷವಾಗಿ ಮೌಲ್ಯಯುತವಾಗಿರುತ್ತದೆ. ತರ್ಕಬದ್ಧ ಮತ್ತು ಉತ್ತಮ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರಿಗೆ ಅನುವು ಮಾಡಿಕೊಡುತ್ತದೆ. ಈ ರೀತಿ ಯೋಚಿಸಿ, ಎಲ್ಲವನ್ನೂ ಅರ್ಥ ಮಾಡಿಕೊಂಡು ನಿರ್ಧಾರ ತೆಗೆದುಕೊಳ್ಳುವುದು ನಿಮ್ಮ ಸಾಮರ್ಥ್ಯ.