
K2 ನ್ಯೂಸ್ ಡೆಸ್ಕ್ : ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡುವ ಮೂಲಕ ಖಾಸಗಿ ಶಾಲೆಗಳಿಗೆ ಚಾಟಿ ಬೀಸಿದೆ. ಶುಲ್ಕ ಪಾವತಿಸಿಲ್ಲ ಎಂಬ ಸಬೂಬು ಮುಂದಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ನಿರಾಕರಿಸುವಂತಿಲ್ಲ ಎಂದು ಆದೇಶ ಹೊರಡಿಸಿದ್ದು ವಿದ್ಯಾರ್ಥಿಗಳಿಗೆ ಕಾಲಾವಕಾಶ ನೀಡಬೇಕು ಎಂದು ಹೇಳಿದೆ .
ಶುಲ್ಕ ಪಾವತಿಸಿಲ್ಲ ಎಂದು ಪರೀಕ್ಷೆ ಬರೆಯಲು ವಿದ್ಯಾರ್ಥಿಗೆ ಅವಕಾಶ ನಿರಾಕರಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಖಾಸಗಿ ಶಾಲೆಯೊಂದು 10ನೇ ತರಗತಿ ವಿದ್ಯಾರ್ಥಿಯೊಬ್ಬ ಶುಲ್ಕ ಕಟ್ಟಿಲ್ಲವೆಂದು ಬೋರ್ಡ್ ಪರೀಕ್ಷೆಯಿಂದ ಹೊರಗಿಟ್ಟಿತ್ತು. ಇದನ್ನು ಪ್ರಶ್ನಿಸಿ ವಿದ್ಯಾರ್ಥಿ ಹೈಕೋರ್ಟ್ ಮೆಟ್ಟಿಲೇರಿದ್ದನು. ವಿಚಾರಣೆ ನಡೆಸಿದ ಕೋರ್ಟ್ ಪರೀಕ್ಷೆ ಬರೆಯಲು ವಿದ್ಯಾರ್ಥಿಗೆ ಅವಕಾಶ ನೀಡಬೇಕು. ಶುಲ್ಕ ಕಟ್ಟಲು ಕಾಲಾವಕಾಶ ನೀಡಬೇಕೆಂದು ಸೂಚನೆ ನೀಡಿದೆ.
![]() |
![]() |
![]() |
![]() |
![]() |
[ays_poll id=3]