K2kannadanews.in
ED enquiry ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿದ್ದು, ಮೊದಲ ದಿನದ ಇ.ಡಿ ವಿಚಾರಣೆ ಮುಗಿಸಿದ ಶಾಸಕ ಬಸವನಗೌಡ ದದ್ದಲ್ ಅವರಿಗೆ ಇಂದು ವಿಚಾರಣೆಗೆ ಹಾಜರಾಗಲು ತಿಳಿಸಿದ್ದಾರೆ.
ಹೌದು ನೊಟಿಸ್ ನೀಡಿದ ಹಿನ್ನಲೆ ಶಾಂತಿನಗರದ ಇ.ಡಿ ಕಚೇರಿಗೆ ಹಾಜರಾಗಿದ್ದ ದದ್ದಲ್ ಅವರನ್ನು ಸುಮಾರು ಏಳು ಗಂಟೆಗಳ ಕಾಲ ವಿಚಾರಣೆ ಎದುರಿಸಿದ ದದ್ದಲ್, ಇ.ಡಿ ಅಧಿಕಾರಿಗಳ ನೋಟಿಸಿಗೆ ಪ್ರತಿಯಾಗಿ ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದೇನೆ. ಇಂದು ಪುನಃ ವಿಚಾರಣೆಗೆ ಕರೆದಿದ್ದಾರೆ, ಬರುತ್ತೇನೆ ಎಂದು ತಿಳಿಸಿ ತೆರಳಿದ್ದಾರೆ.
ಮೂರು ಬಾರಿ ಇಡಿ ನೋಟಿಸ್ ನೀಡಿದ್ದರೂ ಸಹ ಮಾಜಿ ಸಚಿವ ಬಿ.ನಾಗೇಂದ್ರ ಅವರ ಬಂಧನದ ಬಳಿಕ ಸಂಪರ್ಕಕ್ಕೆ ಸಿಗದೆ ಉಳಿದಿದ್ದ ಬಸವನಗೌಡ ದದ್ದಲ್, ನಿನ್ನೆ ಮಧ್ಯಾಹ್ನ ಶಾಂತಿನಗರದ ಇ.ಡಿ ಕಚೇರಿಗೆ ಹಾಜರಾಗಿದ್ದರು. ಪ್ರಕರಣದಲ್ಲಿ ಬಸವನಗೌಡ ದದ್ದಲ್ ನಿವಾಸದಲ್ಲಿ ಶೋಧ ನಡೆಸಿದ್ದ ಇ.ಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆಯ ಕುರಿತು ಅನೇಕ ದಾಖಲೆಗಳನ್ನ ವಶಕ್ಕೆ ಪಡೆದಿದ್ದರು.