ಅಡ್ಡ ಬಂದ ನಾಯಿ ತಪ್ಪಿಸಲು ಹೋಗಿ ದೊಡ್ಡ ಗುಂಡಿಗೆ ಬಿದ್ದ ಆಟೋ..

K 2 Kannada News
ಅಡ್ಡ ಬಂದ ನಾಯಿ ತಪ್ಪಿಸಲು ಹೋಗಿ ದೊಡ್ಡ ಗುಂಡಿಗೆ ಬಿದ್ದ ಆಟೋ..
WhatsApp Group Join Now
Telegram Group Join Now

K2kannadanews.in

Accident news ರಾಯಚೂರು : ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋಗಿ, ರಸ್ತೆ ಪಕ್ಕದಲ್ಲಿದ್ದ ಗುಂಡಿಗೆ ಆಟೋ ಒಂದು ಬಿದ್ದು ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾದ ಘಟನೆ ನಡೆದಿದೆ.

ರಾಯಚೂರು ನಗರದ ಆಶಾಪುರ ರಸ್ತೆಯಲ್ಲಿರುವ ಬಿಸಿಎಂ ಹಾಸ್ಟೆಲ್ ಮುಂಭಾಗದಲ್ಲಿನ ಗುಂಡಿಗೆ ಆಟೋ ಬಿದ್ದಿದೆ. ರಾಯಚೂರು ನಗರದಿಂದ ಆಶಾಪುರ ಕಡೆಗೆ ಹೊರಟಿದ್ದ ಆಟೋಗೆ, ನಾಯಿ ಒಂದು ಅಡ್ಡ ಬಂದಿದೆ. ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದಿದೆ‌. ದೊಡ್ಡ ದೊಡ್ಡ ಕಲ್ಲುಗಳಿದ್ದರೂ ಅದೃಷ್ಟವಶಾತ್ ಚಾಲಕ ಸಣ್ಣಪುಟ್ಟ ಗಾಯಗಳಿಂದ ಪಾರಗಿದ್ದಾನೆ. ಈ ವೇಳೆ ಅಲ್ಲಿ ಸುತ್ತಮುತ್ತಲಿನಲ್ಲಿ ಇದ್ದ ಸಾರ್ವಜನಿಕರು, ಆಟೋದಲ್ಲಿದ ಚಾಲಕನನ್ನ ಮೇಲೆತ್ತಿದ್ದಾರೆ.

WhatsApp Group Join Now
Telegram Group Join Now
Share This Article