This is the title of the web page
This is the title of the web page
Politics News

ಸಂಪೂರ್ಣ ಹದೆಗೆಟ್ಟ ಗ್ರಾಮೀಣ ಕ್ಷೇತ್ರದ ರಸ್ತೆಗಳು ಹದೆಗೆಡಲು ಕಾರಣ ಹಾಲಿ ಮಾಜಿ ಶಾಸಕರು


ರಾಯಚೂರು : ರಾಯಚೂರು ಗ್ರಾಮೀಣ ಕ್ಷೇತ್ರದ ರಸ್ತೆಗಳು ಸಂಪೂರ್ಣ ಹದೆಗೆಟ್ಟಿದ್ದ ಗ್ರಾಮೀಣ ಕ್ಷೇತ್ರದ ರಸ್ತೆಗಳು ಸಂಪೂರ್ಣ ಹದೆಗೆಟ್ಟಿದ್ದು, ಶಾಸಕ ಬಸನಗೌಡ ದದ್ದಲ್ ಅವರು ಅಸಮರ್ಥಕರಾಗಿ ಸಂಪೂರ್ಣ ವಿಫಲರಾಗಿದ್ದಾರೆ.ಒಂದು ವಾರದೊಳಗೆ ರಸ್ತೆಗಳ ದುರಸ್ತಿಗೆ ಮುಂದಾಗದಿದ್ದರೆ ಯರಗೇರದಲ್ಲಿ ರಸ್ತೆ ತಡೆ ಪ್ರತಿಭಟನೆಯನ್ನು ಮಾಡುತ್ತೇವೆ ರಾಯಚೂರು ಗ್ರಾಮೀಣ ಜೆಡಿಎಸ್ ಅಧ್ಯಕ್ಷ ಮಹ್ಮದ್ ನಿಜಾಮುದ್ದೀನ್ ಎಚ್ಚರಿಸಿದರು.

ರಾಯಚೂರು ಗ್ರಾಮೀಣ ಕ್ಷೇತ್ರ ಸುಕ್ಷೇತ್ರ ಗಾಣದಾಳ ಪಂಚಮುಖಿ ಸೇರಿದಂತೆ ಬಹುತೇಕ ಗ್ರಾಮಗಳ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು ಇವುಗಳ ದುರಸ್ತಿ ಹಾಗೂ ಪುನರ್ ನಿರ್ಮಾಣ ಮಾಡದೆ ಶಾಸಕ ಬಸನಗೌಡ ದದ್ದಲ್ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಯರಗೇರಾ ತಲಮಾರಿ ಇಡಪನೂರು ಪ್ರಮುಖ ಊರುಗಳಿಗೆ ಸಂಪರ್ಕ ಕಲ್ಪಿಸುವ ಬಹುತೇಕ ಗ್ರಾಮಗಳ ರಸ್ತೆಗಳು ತೀರಾ ಹದಗೆಟ್ಟು ಹೋಗಿ ಸಂಚಾರಕ್ಕೆ ಅಡಚಣೆಯಾಗಿದೆ ಮಾತ್ರವಲ್ಲ ಕೆಲವೊಮ್ಮೆ ವಾಹನ ಸವಾರರು ಸಾವನ್ನಪ್ಪಿದ ಘಟನೆಗಳು ಸಂಭವಿಸುವಂತೆ ಆಗಿದೆ. ಆದ್ದರಿಂದ ರಸ್ತೆಗಳಿಗೆ ತಾತ್ಕಾಲಿಕವಾಗಯಾದರೆ ಅವುಗಳಿಗೆ ಮರಂ ಆದರೂ ಹಾಕಿ ಸಂಚಾರ ಸುಗಮವಾಗುವಂತೆ ಮಾಡಬೇಕೆಂದು ಆಗ್ರಹಿಸಿದರು.

ಕ್ಷೇತ್ರದ ರಸ್ತೆಗಳು ಕೆಟ್ಟು ಹೋಗಿರುವುದರ ಹೊಣೆಯನ್ನು ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ ಹಾಗೂ ಹಾಲಿ ಶಾಸಕ ಬಸನಗೌಡ ದದ್ದಲ್ ಹೊರಬೇಕಾಗಿದೆ. ತಮ್ಮ ಅಧಿಕಾರಾವಧಿಯಲ್ಲಿ ಅವರು ರಸ್ತೆಗಳ ಅಭಿವೃದ್ಧಿಗೆ ಕಾಳಜಿ ವಹಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು ಬೆಳಗಾವಿ ಅಧಿವೇಶನದಲ್ಲಿ ಕ್ಷೇತ್ರದ ರಸ್ತೆಗಳ ಸ್ಥಿತಿಗತಿಗಳ ಬಗ್ಗೆ ಧ್ವನಿ ಎತ್ತಬೇಕೆಂದು ಸಲಹೆ ನೀಡಿದರು.


[ays_poll id=3]