
K2 ಪೊಲಿಟಿಕಲ್ ನ್ಯೂಸ್ : ಹಾಸನದಲ್ಲಿ ಜರುಗಿದ ಪ್ರಜಾಧ್ವನಿ ಯಾತ್ರೆಯ ಸಮಾವೇಶದ ಆರಂಭದಲ್ಲಿಯೇ ವಿಜ್ಞಾನ ಉಂಟಾಗಿದ್ದು ಇಬ್ಬರು ನಾಯಕರ ಒಳ ಜಗಳ ಬಹಿರಂಗವಾಗಿ ಹೊರಬಿದ್ದಿದೆ.
ಹಾಸನದ ದೊಡ್ಡಮಂಡಿಗನಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆಯ ಸಮಾವೇಶ ನಡೆಯುತ್ತಿದ್ದು, ವೇದಿಕೆ ಮೇಲೆ ಪಕ್ಷದೊಳಗಿನ ಸಂಘರ್ಷ ಬಹಿರಂಗವಾಗಿದೆ. ವೇದಿಕೆಗೆ ಆಗಮಿಸಿದ ಕಲಾವಿದರೊಬ್ಬರು ‘ಸಿದ್ದರಾಮಯ್ಯ ಹಿಡಿದ ಬಡವರ ಕೈ’ ಎಂಬ ಹಾಡನ್ನು ಹಾಡಲೆತ್ನಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಸಂಸದ ಡಿ.ಕೆ.ಸುರೇಶ್, ಯಾವುದೇ ಓರ್ವ ವ್ಯಕ್ತಿಯನ್ನು ವೈಭವೀಕರಿಸಿ ಹಾಡಬೇಡಿ. ಇದು ಪಕ್ಷದ ಕಾರ್ಯಕ್ರಮವೆಂದು ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಕಲಾವಿದ ಧರ್ಮದ ಹಾಡೊಂದನ್ನು ಹಾಡಿದರು.
![]() |
![]() |
![]() |
![]() |
![]() |
[ays_poll id=3]