K2kannadanews.in
BMTC bus ಬೆಂಗಳೂರು : ಬ್ರೇಕ್ (Brack) ಬದಲು ಎಕ್ಸಿಲೇಟರ್ ತುಳಿದ ಬಿಎಂಟಿಸಿ(BMTC) ಚಾಲಕ ಬೈಕ್‌ಗಳಿಗೆ, ಕಾರುಗಳಿಗೆ ಗುದ್ದಿದ್ದ ಘಟನೆ ಬೆಂಗಳೂರಿನ ಹೆಬ್ಬಾಳ ಫ್ಲೈಓವರ್(Hebbala flyover) ಮೇಲೆ ನಡೆದಿದ್ದು, ಬಿಎಂಟಿಸಿ ಬಸ್ ( BMTC Accident) ಅಪಘಾತದ ದೃಶ್ಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ. ಚಾಲಕನ ಯಡವಟ್ಟಿಗೆ (Road Accident) ಸಾರ್ವಜನಿಕರು ನೋವು ಅನುಭವಿಸಬೇಕಾಯಿತು.
ಬೆಂಗಳೂರು (Benglore) ಏರ್‌ಪೋರ್ಟ್‌ನಿಂದ (Airport) ನಗರದೊಳಗೆ ಬರುತ್ತಿದ್ದ ವೋಲ್ವೋ ಬಸ್ (Volo bus) ಏಕಾಏಕಿ ಮುಂದಿದ್ದ ಬೈಕ್‌ಗಳಿಗೆ (Bike) ಗುದ್ದಿದೆ. ಬಳಿಕ ಕಾರಿಗೆ (Cars) ಗುದ್ದಿ ನಿಂತಿದೆ. ಬಸ್‌ನಲ್ಲಿದ್ದ ಕಂಡಕ್ಟರ್ ಬ್ರೇಕ್ ಹಿಡಿಯುವಂತೆ ಹೇಳಿದ್ದರೂ ಗಾಬರಿಯಲ್ಲಿ ಚಾಲಕ ಬ್ರೇಕ್ ಬದಲು ಎಕ್ಸಿಲೇಟರ್ ತುಳಿದಿದ್ದಾನೆ. ಬಸ್ ಚಾಲಕನ ನಿರ್ಲಕ್ಷ್ಯ ಚಾಲನೆಯೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಬಸ್ ಮುಂಭಾಗದಲ್ಲಿದ್ದ ಬೈಕ್‌ಗಳು ಹಾಗೂ ಕಾರು ಜಖಂಗೊಂಡಿದೆ. ಬೈಕ್ ಸವಾರರು ಗಾಯಗೊಂಡು ಚೀರಾಡುತ್ತಾ ನರಳಾಡುತ್ತಿದ್ದರು. ಬಸ್ ಗುದ್ದಿದ ರಭಸಕ್ಕೆ ಸವಾರರು ಒಬ್ಬರ ಮೇಲೆ ಒಬ್ಬರು ಬಿದ್ದಿದ್ದರು. ಅದೃಷ್ಟವಶಾತ್ ಸಣ್ಣಪುಟ್ಟ ಗಾಯದಿಂದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆ.12ರಂದು ಈ ಅಪಘಾತ ಸಂಭವಿಸಿದ್ದು ಚಾಲಕನನ್ನು ಅಮಾನತು ಮಾಡಿ ಬಿಎಂಟಿಸಿ ಆದೇಶ ಹೊರಡಿಸಿದೆ.