ನೋಡ ನೋಡ್ತಿದ್ದಂತೆ ಕುಸಿದು ಬಿದ್ದು ಬಾಲಕ ಸಾವು..

K 2 Kannada News
ನೋಡ ನೋಡ್ತಿದ್ದಂತೆ ಕುಸಿದು ಬಿದ್ದು ಬಾಲಕ ಸಾವು..
Oplus_0
WhatsApp Group Join Now
Telegram Group Join Now

K2kannadanews.in

Viral news ಉತ್ತರ ಪ್ರದೇಶ : ಸಾವು ಯಾರಿಗೆ (whom) ಯಾವಾಗ (when) ಹೇಗೆ (how)ಬರುತ್ತೆ ಅನ್ನೋದು ಊಹಿಸೋಕೂ  (expect) ಆಗುವುದಿಲ್ಲ. ಇತ್ತೀಚಿಗೆ ಮಕ್ಕಳಿಂದ (Children) ಹಿಡಿದು ಗಟ್ಟು ಮುಟ್ಟಾದ ಯುವಕರು (youths) ಕುಸಿದು ಬಿದ್ದು ಸಾವನ್ನು ಕೊಳ್ಳುತ್ತಿರುವ ಘಟನೆಗಳು ಆಗಾಗ ನಮ್ಮ ಕಣ್ಣ ಮುಂದೆ ಬರುತ್ತಿವೆ. ಇದೀಗ ಅಂತದ್ದೇ ಒಂದು ಘಟನೆ ಉತ್ತರಪ್ರದೇಶ(Uttar Pradesh)ದ ಮೀರತ್‌ನಲ್ಲಿ ನಡೆದಿದೆ.

15 ವರ್ಷದ ಬಾಲಕನೋರ್ವ (boy) ಸ್ವಿಮ್ಮಿಂಗ್‌ ಪೂಲ್‌(Swimming pool) ಸಮೀಪ ಎಲ್ಲರೂ ನೋಡುತ್ತಿದ್ದಂತೆ ಕುಸಿದು ಬಿದ್ದಿದ್ದಾನೆ, ಸುತ್ತಲಿನವರು ಬರುವಷ್ಟರಲ್ಲಿ ಆತನ ಪ್ರಾಣ ಪಕ್ಷಿ ಹಾರಿ ಹೋಗುತ್ತದೆ. ಈ ದೃಶ್ಯ ಸಿಸಿಟಿವಿ‌(CCTV) ಕ್ಯಾಮೆರಾದಲ್ಲಿ ಸೆರೆಯಾಗಿದ್ದು. ಈ ಶಾಕಿಂಗ್‌ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದೆ.

ಸಿವಾಲ್ಖಾಸ್‌ ಪ್ರದೇಶದ ನಿವಾಸಿಯಾಗಿರುವ 15 ವರ್ಷದ ಬಾಲಕ ಸಮೀರ್‌, ಬ್ಲೂ ಹೆವನ್‌ (Blue haven) ಸ್ವಿಮ್ಮಿಂಗ್‌ಪೂಲ್‌ಗೆ ಈಜಾಡಲು ಬಂದಿದ್ದ. ನೀರಿನಿಂದ ಹೊರ ಬರುತ್ತಿದ್ದಂತೆ ಸಮೀರ್‌ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾನೆ. ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ (hospital) ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ. ಘಟನೆ ಬಗ್ಗೆ ವರದಿಯಾಗುತ್ತಿದ್ದಂತೆ ಪೊಲೀಸರು (police) ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಅದಾಗ್ಯೂ ಈ ಬಗ್ಗೆ ಬಾಲಕನ ಕುಟುಂಬಸ್ಥರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

WhatsApp Group Join Now
Telegram Group Join Now
Share This Article