K2kannadanews.in
robbed policeman house ರಾಯಚೂರು : ನಗರದ ಪೊಲೀಸ್ (Police) ಕ್ವಾರ್ಟರ್ಸ್‌ನಲ್ಲಿ ಮಹಿಳಾ ಕಾನ್‌ಸ್ಟೆಬಲ್ (lady Constable) ಮನೆಗೆ ಕನ್ನ ಹಾಕಿದ್ದ ಮೂರು ಆರೋಪಿಗಳನ್ನು (accused) 12ಗಂಟೆಯಲ್ಲಿಯೇ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೌದು ರಾಯಚೂರು (Raichur) ನಗರದ ಪೊಲೀಸ್ ಕ್ವಾಟ್ರಸ್(Quattros)ನಲ್ಲಿ ವಾಸಿಸುತ್ತಿದ್ದ ಕಾನ್‌ಸ್ಟೆಬಲ್ ಮಹಾದೇವಿ ಅವರ ಮನೆಯಲ್ಲಿ, 10 ಲಕ್ಷ ನಗದು(amount) ಕಳ್ಳತನ (Theft) ಮಾಡಿದ್ದರು. ಈ ಕುರಿತು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಅದೇ ಕ್ವಾರ್ಟರ್ಸ್‌ನಲ್ಲಿ ಸೂಪೈರ್ ವೈಸರ್ ಆಗಿದ್ದ ವಿಶ್ವನಾಥ, ಫ್ಲಂಬರ್ (Clamber) ಮಹೇಶ, ಪಿ.ಗೋವಿಂದನನ್ನು 12 ಗಂಟೆಯಲ್ಲಿಯೇ ಬಂಧಿಸಿ, ಆರೋಪಿಗಳಿಂದ 8.7 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖಾ ತಂಡದಲ್ಲಿ ಪಶ್ಚಿಮ ಪೊಲೀಸ್ ಠಾಣೆಯ ಸಿಪಿಐ ನಾಗರಾಜ ಮೇಕಾ, ಪಿಎಸ್‌ಐ ಅಮಿತಾ, ಚಂದ್ರಪ್ಪ ಸಿಬ್ಬಂದಿ ಅಮರೇಶ, ಗುರುಸ್ವಾಮಿ, ಪ್ರವೀಣ, ಹನುಮಂತರಾಯ, ಶರಣಬಸವ ಇದ್ದರು.