K2kannadanews.in
Kidnap in train ರಾಯಚೂರು : ಉದ್ಯಾನ್ ಎಕ್ಸ್ಪ್ರೆಸ್ (udyan express) ರೈಲಿನಲ್ಲಿ ಮಗುವನ್ನು ಕದ್ದು ಇದೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ರೈಲ್ವೆ ಪೊಲೀಸರು (railway police) ಆರೋಪಿಗಳನ್ನು ಅರೆಸ್ಟ್ (arrested) ಮಾಡಿದ್ದು, ಪಾಲಕರಿಗೆ ಮಗುವನ್ನು ಹಸ್ತಾಂತರಿಸುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ. ಆದ್ರೆ ಆರೋಪಿಗಳನ್ನು ಹಿಡಿದಿದ್ದೆ ರೋಚಕ ಕಥೆ ಮುಂದೆ ಓದಿ.
ರಾಯಚೂರಿನಿಂದ (Raichur) ಬೆಂಗಳೂರಿಗೆ (Benglore) ಉದ್ಯಾನ ಎಕ್ಸ್ ಪ್ರೆಸ್ ರೈಲಿನಲ್ಲಿ ದೇವದುರ್ಗದ (Devadurga) ಬಂಡೆಗುಡ್ಡ ತಾಂಡಾದ ಪ್ರಕಾಶ್ ಹಾಗೂ ಹಂಪಮ್ಮ ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಗುಳೆ ಹೊರಟಿದ್ದರು. ಅದೇ ರೈಲಿನಲ್ಲಿ ಕಲಬುರ್ಗಿ (Kalburgi) ಮೂಲದ ದಂಪತಿ ರೂಪೇಶ್ ಹಾಗೂ ಕುಸುಮ ಪ್ರಯಾಣಿಸುತ್ತಿದ್ದರು. ರೈಲಿನಲ್ಲಿ ಅಕ್ಕಪಕ್ಕದ ಸೀಟಿನಲ್ಲಿ ಎರಡೂ ದಂಪತಿ ಜೊತೆಯಾಗಿದ್ದಾರೆ. ದೂರದ ಪ್ರಯಾಣ ಹಾಗಾಗಿ ಪಕ್ಕದ ಸೀಟಿನಲ್ಲಿ ಕುಳಿತಿದ್ದ ದಂಪತಿ ಜೊತೆ ಸಹಜವಾಗಿಯೇ ಮಾತುಕತೆ ನಡೆದಿದೆ ಸಲುಗೆಯೂ ಬೆಳೆದಿದೆ.
ರೂಪೇಶ್ ಹಾಗೂ ಕುಸುಮಾ ದಂಪತಿ, ಪ್ರಕಾಶ್ ಹಾಗೂ ಹಂಪಮ್ಮ ದಂಪತಿಯ ಮೂರು ವರ್ಷದ ಮಗುವಿನೊಂದಿಗೆ ಮಾತನಾಡುತ್ತಾ ಆತ್ಮೀಯತೆ ಬೆಳೆಸಿಕೊಂಡಿದ್ದಾರೆ. ರಾತ್ರಿ ರೈಲಿನಲ್ಲಿ ಮಲಗುವ ವೇಳೆ ಮಗುವಿಗೆ ಬಿಸ್ಕೆಟ್ ಕೊಟ್ಟಿದ್ದಾರೆ. ಮಗುವಿನ ತಂದೆ-ತಾಯಿ ರಾತ್ರಿ ನಿದ್ರೆಗೆ ಜಾರುತ್ತಿದ್ದಂತೆ ಮಗುವನ್ನು ಎತ್ತಿಕೊಂಡು ಅನಂತಪುರ ರೈಲು ನಿಲ್ದಾಣದಲ್ಲಿ ಇಳಿದು ಎಸ್ಕೇಪ್ ಆಗಿದ್ದಾರೆ. ಮಗು ಕಾಣೆಯಾಗುತ್ತಿದ್ದಂತೆ ತಂದೆ ಅನಂತಪುರ ರೈಲ್ವೇ ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಕಾರ್ಯಪ್ರವ್ರತ್ತರಾದ RPF ಪೊಲೀಸರು ತನಿಖೆ ಆರಂಬಿಸಿದ್ದಾರೆ.
ಅನಂತಪುರ (Anathapura) ರೈಲು ನಿಲ್ದಾಣದಿಂದ ಮಗುವನ್ನು ಬಸ್ಸಿನಲ್ಲಿ ಕರೆದುಕೊಂಡು ನೇರವಾಗಿ ಮಂತ್ರಾಲಯಕ್ಕೆ ಬಂದ ಆರೋಪಿಗಳು, ಮಗುವನ್ನು ಯಾರು ಪತ್ತೆ ಹಚ್ಚಬಾರದು ಎಂದು ಮಂತ್ರಾಲಯದಲ್ಲಿ ಮಗುವಿನ ಕೂದಲು ಕತ್ತರಿಸಿದ್ದಾರೆ. ಬಳಿಕ ರಾಯಚೂರು ಬಸ್ ನಿಲ್ದಾಣಕ್ಕೆ (Bus stop) ಬಂದಿದ್ದಾರೆ. ಅಲ್ಲಿ ಬಸ್ ನಿಲ್ದಾಣದಲ್ಲಿ ಓಡಾಡುತ್ತಿದ್ದ ದಂಪತಿ ಹಾಗೂ ಮಗು ಬಗ್ಗೆ ಅನುಮಾನಗೊಂಡ ಪೊಲೀಸರು (Police) ವಿಚಾರಿಸಿದಾಗ ಮಗು ಕಿಡ್ನ್ಯಾಪ್ ಮಾಡಿ ಕರೆದೊಯ್ಯುತ್ತಿರುವುದು ಬಹಿರಂಗವಾಗಿದೆ. ದಂಪತಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಮದುವೆಯಾಗಿ (Marriage) 22 ವರ್ಷವಾದರೂ ಮಕ್ಕಳಿರಲಿಲ್ಲ. ಹಾಗಾಗಿ ಮಗುವನ್ನು ಕದ್ದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಮಗು ಕದಿಯುವ ಮೊದಲು ತಂದೆ-ತಾಯಿಗೆ (Father mother) ದಂಪತಿ ಮೊಬೈಲ್ ನಂಬರ್ ಕೊಟ್ಟಿದ್ದರಂತೆ. ಕಾರಣ ಯಾವುದಾದರೂ ಮಗು ಇದ್ದರೆ ಹೇಳಿ ದತ್ತು ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದರಂತೆ. ಮಗು ಕಾಣೆಯಾದಾಗ ಮಗುವಿನ ತಂದೆ-ತಾಯಿ ಈ ಮೊಬೈಲ್ ನಂಬರ್ ಬಗ್ಗೆ ಪೊಲೀಸರಿಗೆ ತಿಳಿಸಿದ್ದರು. ನಂಬರ್ ಟ್ರೇಸ್ ಮಾಡಿದಾಗ ರಾಯಚೂರು ಬಸ್ ನಿಲ್ದಾಣದಲ್ಲಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿ ದಂಪತಿಯನ್ನು ಬಂಧಿಸಿದ್ದಾರೆ. ಆರೋಪಿಗಳ ಬಂಧನದೊಂದಿಗೆ ಪಾಲಕರಿಂದ ತಪ್ಪಿದ್ದ ಮಗು ಮತ್ತೆ ಪಾಲಕರ ಮಡಲಿಗೆ ಸೇರಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ.