ರಾಘವೇಂದ್ರ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ
![]() |
![]() |
![]() |
![]() |
![]() |
ರಾಯಚೂರು : ರಾಘವೇಂದ್ರ ದಿ ವಾರಿಯರ್ ಚಲನಚಿತ್ರದ ಹಾಡು ಮತ್ತು ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮವು ಜನವರಿ 19 ರಂದು ಹಮ್ಮಿಕೊಳ್ಳಲಾಗಿದೆ ಎಂದು ಅಮರೇಗೌಡ ಹೇಳಿದರು.
ಡಾ.ಪುನೀತ್ ರಾಜಕುಮಾರ್ (ಅಪ್ಪು) ಚಾರಿಟೇಬಲ್ ಟ್ರಸ್ಟ್ ರಾಯಚೂರು, ಅಪ್ಪು ಯೂತ್ ಬ್ರಿಗೇಡ್ ಸಂಯುಕ್ತಶ್ರಯದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಪತ್ರಿಕಾ ಭವನದ ಸಭಾಂಗಣದಲ್ಲಿ ಸಂಜೆ 5 ಗಂಟೆಗೆ ರಾಘವೇಂದ್ರ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗುತ್ತದೆ. ಈ ಚಲನಚಿತ್ರದಲ್ಲಿ ನಾಯಕಿಯ ತಮ್ಮನ ಪಾತ್ರದಲ್ಲಿ ರಾಯಚೂರಿನ ರಾಂಪೂರನವರಾದ ಸೂರಿ ನಟಿಸಿದ್ದು ಕೂಡ ಒಂದು ಹೆಮ್ಮೆಯ ವಿಚಾರ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ರಾಘವೇಂದ್ರ ಚಿತ್ರದ ಪೋಸ್ಟರ್ ಕೂಡ ಬಿಡುಗಡೆ ಮಾಡಲಾಯಿತು.
![]() |
![]() |
![]() |
![]() |
![]() |