
ಲಿಂಗಸುಗೂರು : ಸಾಮಾನ್ಯವಾಗಿ ಮಕ್ಕಳು ಶಾಲೆಗೆ ಚಕ್ಕರ್ ಹಾಕಿ ಊರಲ್ಲಿ ಓಡಾಡುವುದು ನೋಡಿದ್ದೇವೆ, ಆದ್ರೆ ಶಾಲೆಯ ಶಿಕ್ಷಕರು ಶಾಲೆಗೆ ಚಕ್ಕರ್ ಹಾಕಿ ಬಾರ್ ನಲ್ಲಿ ಕೂತು ಕುಡಿದ್ರೆ ಹೇಗಿರುತ್ತೆ ಹೌದು ಅಂತ ಒಂದು ಪ್ರಸಂಗ ರಾಯಚೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಬೇಕಾದ ಶಿಕ್ಷಕರೇ ನಡು ಮಧ್ಯಾಹ್ನ ಬಾರಗಳಲ್ಲಿ ಕುಳಿತು ಮತ್ತೇರಿಸುತ್ತಿರುವ ಘಟನೆ ರಾಯಚೂರು ಜಿಲ್ಲೆಯ ಹಟ್ಟಿಯಲ್ಲಿ ನಡೆದಿದೆ. ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಕ್ಯಾಂಪಿನ ಪ್ರೌಢ ಶಾಲೆಯ ಶಿಕ್ಷಕರು ಮಧ್ಯಾಹ್ನ ಈ ರೀತಿ ಮೋಜು ಮಾಡುತ್ತಿರುವುದನ್ನ ಸ್ವತಃ ಪೋಷಕರೇ ವಿಡಿಯೋ ಮಾಡಿ ಬಿಡುಗಡೆ ಮಾಡಿದ್ದಾರೆ. ನೋಡಲು ಸಂಭಾವಿತರಂತೆ ಕಾಣುವ ಈ ಶಿಕ್ಷಕರ ಮೋಜಿನ ವರ್ತನೆಗೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರನ್ನು ಅಮಾನತು ಮಾಡಬೇಕು ಎಂದು ಡಿಡಿಪಿಐ ಮತ್ತು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹಟ್ಟಿ ಪ್ರೌಢ ಶಾಲಾ ಮುಖ್ಯಗುರುಗಳಾದ ಮುರಳೀಧರ ರಾವ್ ನೇತೃತ್ವದಲ್ಲೇ ಈ ಪಾರ್ಟಿ ನಡೆದಿದೆ ಎಂದು ಆಪಾದಿಸಲಾಗಿದೆ. ದೈ.ಶಿ ಚನ್ನಪ್ಪ ರಾಠೋಡ್, ಲಿಂಗಪ್ಪ ಪೂಜಾರ, ಕೇಶವ್ ಕುಮಾರ್, ಅಬ್ದುಲ್ ಅಜೀಜ್ ಅವರಿಗೆ ಪಾರ್ಟಿಯಲ್ಲಿ ಸಹವರ್ತಿಗಳು. ಇವರು ಮಧ್ಯಾಹ್ನ ಊಟಕ್ಕೆಂದು ಬಿಟ್ಟ ಅವಧಿಯಲ್ಲಿ ಬಾರಗಳಿಗೆ ಹೋಗಿ ಮೋಜು ಮಸ್ತಿ ಮಾಡುತ್ತಾರೆ. ಎಂದು ಆಪಾದಿಸಲಾಗಿದೆ. ಹಾಗೆ ಹೋದವರು ಎಷ್ಟೇ ಗಂಟೆಗಳ ಕಾಲ ಮರಳಿ ಬರುವುದಿಲ್ಲ. ಬಂದರೂ ಕೆಲವೊಮ್ಮೆ ಪಾಠ ಮಾಡುವ ಸ್ಥಿತಿಯಲ್ಲಿ ಇರುವುದಿಲ್ಲ. ಹೀಗಾಗಿ ಬಹುತೇಕ ಸಂದರ್ಭದಲ್ಲಿ ಮಧ್ಯಾಹ್ನದ ನಂತರ ಕ್ಲಾಸ್‌ಗಳೇ ಇರುವುದಿಲ್ಲ. ಈ ವಿಚಾರಗಳನ್ನು ಗಮನಿಸಿದ ಪೋಷಕರಲ್ಲಿ ಕೆಲವರು ಜತೆಯಾಗಿ ಇವರ ಕುಡಿತದ ಚಟುವಟಿಕೆಗಳನ್ನು ವಿಡಿಯೊ ಮಾಡಿದ್ದಾರೆ. ಜತೆಗೆ ಜಿಪಿಎಸ್ ಅಳವಡಿಸಿ ತರಗತಿಗೆ ನಿಗದಿಯಾದ ಸಂದರ್ಭದಲ್ಲಿ ಶಾಲೆಯಲ್ಲಿ ಯಾರೂ ಇಲ್ಲದಿರುವ ಚಿತ್ರಗಳನ್ನು ತೆಗೆದಿದ್ದಾರೆ. ಈ ಚಿತ್ರಗಳು ಮತ್ತು ವಿಡಿಯೊವನ್ನು ಬಿಡುಗಡೆ ಮಾಡಿದ್ದು, ಇದೀಗ ಎಲ್ಲ ಕಡೆ ವೈರಲ್ ಆಗಿದೆ. ಶಿಕ್ಷಕರನ್ನು ಅಮಾನತು ಮಾಡಬೇಕು ಎಂಬ ಕೂಗು ಜೋರಾಗಿದೆ.
![]() |
![]() |
![]() |
![]() |
![]() |
[ays_poll id=3]