This is the title of the web page
This is the title of the web page
State News

ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ತಾಲಿಬಾನ್ ಮಾದರಿ ಸರ್ಕಾರ ಬರುತ್ತೆ ರಾಯಚೂರಿನಲ್ಲಿ ಪ್ರತಾಪ್ ಸಿಂಹ ವಾಗ್ದಾಳಿ


ರಾಯಚೂರು: 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನ ಅಧಿಕಾರ ಗದ್ದುಗೆಯಲ್ಲಿ ಕೂಡಿಸಿದರೆ ತಾಲಿಬಾನ್ ಮಾದರಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಹೊರತು ಕನ್ನಡಿಗರ ಸರ್ಕಾರ ಅಲ್ಲ ಎಂದು ರಾಯಚೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ತಾಲೂಕಿನ ಯಾಪಲದಿನ್ನಿ ಗ್ರಾಮದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು. ಸಿದ್ದರಾಮಯ್ಯ ಅವರು ಟಿಪ್ಪು ಹುಟ್ಟಿನ ಬಗ್ಗೆ ಕುಂಡಲಿ ಬರುಸುತ್ತಾರೆ ಆಂಜನೇಯ ದೇವತೆ ಬಗ್ಗೆ ಪ್ರಶ್ನೆ ಮಾಡುತ್ತಾರೆ ಹಿತ ಡಿಕೆ ಶಿವಕುಮಾರ್ ಅವರು ಬೆಟ್ಟವನ್ನು ಏಸು ಬೆಟ್ಟ ಮಾಡಲು ಹೋದಂತಹ ವ್ಯಕ್ತಿ ಎಂದು ಟೀಕಿಸಿದರು. ಕಾಂಗ್ರೆಸ್​ನವರು ಮುಸ್ಲಿಂರಿಗೆ ಅಕ್ರಮವಾಗಿ ಕೊಟ್ಟ 4% ಮೀಸಲಾತಿಯನ್ನು ವಾಪಸ್ ತರುತ್ತೇವೆ ಎಂದು ಹೇಳುತ್ತಿದ್ದಾರೆ. ಹಿಂದುಳಿದ ಸಮುದಾಯದ ಮೀಸಲಾತಿ ಕಿತ್ತು ಅವರಿಗೆ ಕೊಡ್ತಾರೆ, ಗೋ ಹತ್ಯೆ ಮಾಡುವವರಿಗೆ ಮೀಸಲಾತಿ ಕೊಡ್ತಾರಂತೆ ಎಂದು ವಾಗ್ದಾಳಿ ನಡೆಸಿದರು.

ಸದ್ಯ ಮಾಜಿ ಸಿದ್ದರಾಮಯ್ಯ ಕತೆ ಏನಾಗಿದೆ ಅಂದ್ರೆ, 10 ಕೆ.ಜಿ ಉಚಿತ ಅಕ್ಕಿ ನೀಡುವುದಾಗಿ ಹೇಳುತ್ತಿದ್ದಾರೆ. ನಾಮಿನೆಷನ್ ಅದ‌ ಮೇಲೆ ಮತದಾನಕ್ಕೆ ಮತ್ತೆ ತಮ್ಮ ಕ್ಷೇತ್ರಕ್ಕೆ ಬರ್ತಿನಿ ಅಂದೋರು, ಸೋಮಣ್ಣ ಸ್ಪರ್ಧಿಸಿದ್ದಕ್ಕೆ ಮರುದಿನವೇ ವರುಣಕ್ಕೆ ಬಂದ್ರು, ಮತದಾನಕ್ಕೆ ಐದು ದಿನ ಬಾಕಿ ಇರುವಾಗ ಈಗ ಮೈಸೂರಿಗೆ ಬಂದಿದ್ದಾರೆ ಎಂದರು. ಸಂತೋಷ ಜೀ ಬಗ್ಗೆ ಸುಳ್ಳು ಸುದ್ದಿ ಮಾಡಿ ಕಾಂಗ್ರೆಸ್‌ನವರು ಪ್ರಚಾರ ಮಾಡುತ್ತಿದ್ದಾರೆ, ವೀರಶೈವರ ಬಗ್ಗೆ ಹಗರವಾಗಿ ಮಾತನಾಡಿದ್ದಾರೆ ಅಂತ ಅಪಪ್ರಚಾರ ಮಾಡುತ್ತಿದ್ದಾರೆ, ಕಾಂಗ್ರೆಸ್​ನವರು ಈ ಬಗ್ಗೆ ವಾಟ್ಸಾಪ್ ನಲ್ಲಿ ಹರಿಬಿಡುತ್ತಿದ್ದಾರೆ. ಸಂತೋಷ ಅವರ ಬಗ್ಗೆ ಕಾಂಗ್ರೆಸ್‌ಗೆ ನಡುಕ ಶುರುವಾಗಿದೆ, ವೀರಶೈವ ಸೇರಿ ಎಲ್ಲಾ ಸಮುದಾಯ ಉಳಿಯಲು ಬಿಜೆಪಿ ಸರ್ಕಾರ ಬರಬೇಕು ಎಂದರು. ಈ ವೇಳೆ ಕೇಂದ್ರ ಸಚಿವ ಮನ್ಸುಖ್​ ಮಾಂಡವಿಯಾ ಸೇರಿದಂತೆ ಇತರ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.


[ays_poll id=3]