ಸಿಂಧನೂರು : ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ಉಪಹಾರ ನೀಡದ ದೂರುಗಳು ಬಂದ ಹಿನ್ನೆಲೆಯಲ್ಲಿ, ಶಾಸಕ ಹಂಪನಗೌಡ ಬಾದರ್ಲಿ ಅದೇ ಉಪಹಾರ ಅಧಿಕಾರಿಗಳಿಗೆ, ತಿನ್ನಿಸಿ ತರಾಟೆ ತೆಗೆದುಕೊಂಡ...
ಸಿಂಧನೂರು : ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ವಸತಿ ನಿಲಯದ ಕಾರ್ಮಿಕರಿಗೆ ಮಾನಸಿಕ ಕಿರುಕುಳ ನೀಡಿ ಕಾರ್ಮಿಕರ ಮೇಲೆ ಗುಂಡಾವರ್ತನೆ ಮೆರೆಯುತ್ತಿರುವ ವಾರ್ಡನ್ ರವಿಚಂದ್ರನರನ್ನು ಅಮಾನತ್...
ಮಾನ್ವಿ : ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರಕಾರಿ ಹಾಸ್ಟೆಲ್ ನಲ್ಲಿ ಅಡಿಗೆಯವರು, ಅಡುಗೆ ಸಹಾಯಕರು, ಮತ್ತು ರಾತ್ರಿ ಕಾವಲುಗಾರ ಕಾರ್ಮಿಕರಿಗೆ ಸಕಾಲಕ್ಕೆ ಸಂಬಳ ನೀಡುತ್ತಿದ್ದೇವೆ ಎಂದು ಹೇಳುತ್ತೆ. ಆದರೆ ಮಾನ್ವಿ ತಾಲೂಕಿನ ಬಿಸಿಎಂ ಇಲಾಖೆಯಲ್ಲಿ 11 ತಿಂಗಳಿಂದ ಸಂಬಳ ನೀಡದಿರುವುದಕ್ಕೆ ಕಾರ್ಮಿಕರು ನಮಗೆ ನ್ಯಾಯಬೇಕು ಎಂದು ಹೈದ್ರಾಬಾದ್ ಕರ್ನಾಟಕ ವಿದ್ಯಾರ್ಥಿ ಒಕ್ಕೂಟದ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಮಾನ್ವಿ ತಾಲೂಕಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಅಂಬವ್ವ ಕಾರ್ಮಿಕರನ್ನು ದುಡಿಸಿಕೊಂಡು ಸಂಬಳ ನೀಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಹಾಸ್ಟೆಲ್ ನಲ್ಲಿ ಅಡುಗೆ ಮಾಡಿ ನಾವು ಬದುಕು ಸಾಗಿಸುತ್ತಿದ್ದೇವೆ. ಇದನ್ನು ಬಿಟ್ಟರೆ ನಮಗೆ ಬೇರೆ ಏನು ಗೊತ್ತಿಲ್ಲ. 11 ತಿಂಗಳಿಂದ ನಮಗೆ ಸಂಬಳ ಆಗಿರುವುದಿಲ್ಲ. ನಮ್ಮ ಕುಟುಂಬ ಹೇಗೆ ಜೀವನ ಸಾಗಿಸುವುದು? ನಮ್ಮ ಮಕ್ಕಳ ಶಿಕ್ಷಣಕ್ಕೆ...
ರಾಯಚೂರು : ಹಾಸ್ಟೆಲ್ ಹೊರಗುತ್ತಿಗೆ ಕಾರ್ಮಿಕರ ಪ್ರಥಮ ರಾಜ್ಯ ಮಟ್ಟದ ಸಮ್ಮೇಳನವನ್ನು ಡಿಸೆಂಬರ್ 17,18 ರಂದು ಎರಡು ದಿನಗಳ ಕಾಲ ಮೈಸೂರಿನ ಮಹಾರಾಜ ಕಾಲೇಜು, ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಕೆ.ಸೋಮಶೇಖರ್ ಯಾದಗಿರಿ ಹೇಳಿದರು. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಾವಿರಾರು ಹಾಸ್ಟೆಲ್ ಕಾರ್ಮಿಕರಿಂದ ಬೃಹತ್ ಮೆರವಣಿಗೆ ನಡೆಯಲಿದೆ. 17ರಂದು ಬೆಳಿಗ್ಗೆ ಬಹಿರಂಗ ಅಧಿವೇಶನ, ಮಹಾರಾಜ ಕಾಲೇಜಿನಲ್ಲಿ ಶತಮಾನೋತ್ಸವ ಭವನದಲ್ಲಿ ನಡೆಯಲಿದೆ. ಅದೇ ದಿನ ಸಂಜೆಯಿಂದ ಡಿಸೆಂಬರ್ 18ರ ಸಂಜೆಯವರೆಗೆ ಅಧಿವೇಶನ ನಡೆಯಲಿದೆ. ಈ ಅಧಿವೇಶನದಲ್ಲಿ ಸುಮಾರು 400 ಜನ ಪ್ರತಿನಿಧಿ ಗಳು ಭಾಗವಹಿಸಲಿದ್ದಾರೆ ಎಂದರು. ಕರಡು ಮುಖ್ಯ ಗೊತ್ತುವಳಿ, ಸಂಘಟನಾತ್ಮಕ ಕೊರತೆ ಹಾಗೂ ಹೊರಗುತ್ತಿಗೆ ಪದ್ಧತಿ ರದ್ದುಪಡಿಸಿ, ಸರ್ಕಾರವೇ ವೇತನ ಸಹಿತ ಶಾಸನಬದ್ಧ ಸೌಕರ್ಯಗಳನ್ನು ನೀಡಬೇಕೆಂದು ಅಗ್ರಹಿಸಿ ಮಂಡನೆಯಾಗುವ ಗೊತ್ತುವಳಿಗಳ ಮೇಲೆ ಚರ್ಚೆಗಳು ನಡೆಯಲಿವೆ. ನಂತರ...