ರಾಯಚೂರು: ಕರ್ನಾಟಕ ತೆಲಂಗಾಣದ ಗಡಿ ಜಿಲ್ಲೆ ರಾಯಚೂರು ಜಿಲ್ಲೆಯ ಗಡಿ ಭಾಗದ ಚೆಕ್ ಪೋಸ್ಟ್‌ನಲ್ಲಿ ಲಕ್ಷಾಂತರ ರೂಪಾಯಿ ಪತ್ತೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ರಾಯಚೂರು ತಾಲೂಕಿನ ಶಕ್ತಿನಗರದ...
K2 ನ್ಯೂಸ್ ಡೆಸ್ಕ್ : ಎಸ್.ಬಿ.ಐ. ಬ್ಯಾಂಕ್‍ನಿಂದ 1.40 ಲಕ್ಷ ರೂ. ಡ್ರಾ ಮಾಡಿಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಹಿಂಬಾಲಿಸಿ ಮಾಡಿ ಸಿನಿಮಾ ರೀತಿಯಲ್ಲಿ ಹಣ ಇರುವ ಬ್ಯಾಕ್ ಅಪಹರಿಸಿ ಪರಾರಿಯಾದ ಘಟನೆ ಚಿತ್ತಾಪುರ ಪಟ್ಟಣದ ರೈಲ್ವೆ ಕ್ವಾಟರ್ಸ ಬಳಿ ನಿನ್ನೆ ಮಧ್ಯಾಹ್ನ ನಡೆದಿದೆ. ಚಿತ್ತಾಪುರ ತಾಲ್ಲೂಕಿನ ಮೊಗಲಾ ತಾಂಡಾದ ಶಂಕರ ರಾಠೋಡ್ ಎಂಬುವವರು ಚಿತ್ತಾಪುರದ ಎಸ್.ಬಿ.ಐ. ಬ್ಯಾಂಕ್‍ನಿಂದ 1.40 ಲಕ್ಷ ರೂ. ಡ್ರಾ ಮಾಡಿಕೊಂಡು ಇನ್ನೊಬ್ಬ ವ್ಯಕ್ತಿಯೊಂದಿಗೆ ಬೈಕ್ ಮೇಲೆ ರೈಲ್ವೆ ಕ್ವಾಟರ್ಸ ಕಡೆಗೆ ಹೊರಟಿದ್ದರು. ಇದನ್ನು ಗಮನಿಸಿದ ಇಬ್ಬರು ಸುಲಿಗೆಕೋರರು ಅವರನ್ನು ಹಿಂಬಾಲಿಸಿ 1.40 ಲಕ್ಷ ರೂ. ಇದ್ದ ಹಣದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದಾರೆ. ಖದೀಮರು ಮಂಕಿಕ್ಯಾಪ್ ಧರಿಸಿದ್ದರು ಎಂದು ತಿಳಿದುಬಂದಿದೆ. ಶಂಕರ ರಾಠೋಡ್ ಅವರು ಬ್ಯಾಂಕಿನಲ್ಲಿ ಸಾಲದ ರೂಪದಲ್ಲಿ ಪಡೆದಿದ್ದ ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ. ಈ ಸಂಬಂಧ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,...
ಮಾನ್ವಿ : 15 ನೇ ಹಣಕಾಸು ಯೋಜನೆಯ ಅನುದಾನ ಹಣದುರ್ಬಳಕೆ ಮಾಡಿರುವ ಉಟಕನೂರು ಗ್ರಾ.ಪಂ ಪಿಡಿಓ ರಾಮಪ್ಪ ನಡಗೇರಿ ಇವರನ್ನು ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ. ಹೈದ್ರಾಬಾದ್ -ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಎಂ.ಬಿ.ನಾಯಕ ಮಾನ್ವಿ ತಾಲೂಕಿನ ಉಟ ಕನೂರು ಗ್ರಾಮ ಪಂಚಾಯತಿಯಲ್ಲಿ ಪ್ರಸಕ್ತ ಸಾಲಿನ 15 ಪಂಚವಾರ್ಷಿಕ ಹಣಕಾಸು ಯೋಜನೆಯಲ್ಲಿ ಅಂದಾಜು 40 ಲಕ್ಷ ರೂ.ಹಣ ದುರ್ಬಳಕೆಯಾಗಲು ಗ್ರಾ.ಪಂ ಪಿಡಿಓ ರಾಮಪ್ಪ ನಡಗೇರಿ ಕಾರಣೀಕರ್ತನಾಗಿದ್ದಾನೆ. 15 ನೇ ಹಣಕಾಸು ಯೋಜನೆಗೆ ಸಂಬಂಧಪಟ್ಟಂತೆ ಪಿಡಿಓ ರಾಮಪ್ಪ, ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷ ರಾಗಿ ಹಾಗೂ ಸದಸ್ಯರು ಯಾವುದೇ ಕ್ರಿಯಾ ಯೋಜನೆ ರೂಪಿಸದೇ ಅಂದಾಜು 40 ಲಕ್ಷ ರೂ.ಹಣ ವಿವಿಧ ಏಜೇನ್ಸಿ ಹಾಗೂ ವೆಂಡರುಗಳ ಹೆಸರಿಗೆ ವರ್ಗಾವಣೆ ಮಾಡಿರುವ ದಾಖಲೆಗಳನ್ನು ಮಾಹಿತಿ ಹಕ್ಕು ಮೂಲಕ ಪಡೆದು ಪರಿಶೀಲಿಸಿದಾಗ ಯಾವುದೇ ಕಾಮಗಾರಿ ಮಾಡದೇ ಹಣ ಕ೦ಡುಬಂದಿದೆ....