K2 ಹೆಲ್ತ್ ಟಿಪ್ : ಪ್ರಸ್ತುತ ದಿನದಲ್ಲಿ ನಾವು ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಎಲ್ಲಿಲ್ಲದ ಕಸರತ್ತುಗಳನ್ನು ಮಾಡುತ್ತೇವೆ. ಹಿರಿಯರು ಹೇಳುವಂತೆ ಅಡುಗೆ ಮನೆಯಲ್ಲಿ ಅಡಗಿದೆ ಆರೋಗ್ಯ ಎಂಬ...
ರಾಯಚೂರು : ಭಾರತ ದೇಶ ಪ್ರಜಾಪ್ರಭುತ್ವದ ದೇಶವಾಗಿದ್ದು, ದೇಶದಲ್ಲಿ ವಾಸಿಸುವ ಎಲ್ಲರೂ ಪ್ರಜಾಪ್ರಭುತ್ವದ ಒಂದು ಭಾಗವಾಗಿದ್ದೇವೆ. ಮತದಾನದ ಹಕ್ಕು ಪ್ರತಿಯೊಬ್ಬರ ಜವಾಬ್ದಾರಿ ಮತ್ತು ಕರ್ತವ್ಯವಾಗಿದ್ದು, ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಮತದಾನದ ಹಕ್ಕನ್ನು ಪಡೆಯುವಲ್ಲಿ ಮುಂದಾಗಬೇಕೆಂದು ಸ್ವೀಪ್ ಸಮಿತಿ ಅಧ್ಯಕ್ಷರೂ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಅವರು ಹೇಳಿದರು. ನಗರದ ನವೋದಯ ವೈದ್ಯಕೀಯ ಮಹಗಾವಿದ್ಯಾಲಯದಲ್ಲಿ ಸ್ವೀಪ್ ಸಮಿತಿಯಿಂದ ಹಮ್ಮಿಕೊಂಡಿದ್ದ ಮತದಾರರ ಪಟ್ಟಿಗೆ ಹೆಸರನ್ನು ನೊಮದಾಯಿಸುವ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಇತ್ತೀಚಿಗೆ ನಗರದ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಪಟ್ಟಿಗೆ ಹೆಸರನ್ನು ನೊಮದಾಯಿಸಿಕೊಳ್ಳಲು ಆಸಕ್ತಿ ತೋರಿಸಲು ಮುಂದಾಗುತ್ತಿಲ್ಲ. ಅಂಕಿ ಸಂಖ್ಯೆಗಳ ಪ್ರಕಾರ ನಗರ ಪ್ರದೇಶಗಳಲ್ಲಿ ಕೇವಲ ಶೇ.50 ರಷ್ಟು ಜನರು ಮಾತ್ರ ಮತದಾರರ ಪಟ್ಟಿಗೆ ಹೆಸರನ್ನು ನಿಂದಾಯಿಸಿಕೊಂಡು ಮತದಾನದ ಹಕ್ಕನ್ನು ಪಡೆಯಲು ಮುಂದಾಗುತ್ತಿದ್ದಾರೆ ಎಂದರು. ಮತದಾನವೆಂಬುವುದು ಪ್ರತಿಯೊಬ್ಬರ...