ಲಿಂಗಸುಗೂರು : ಸ್ನೇಹಿತನ ಮೂಲಕ ಲಂಚ ಪಡೆಯುವಾಗ ಸರ್ವೆಯರ್ ಲೋಕಾಯುಕ್ತರ ಬಲೆಗೆ ಬಿದ್ದಿರುವ ಘಟನೆ ಲಿಂಗಸುಗೂರಿನಲ್ಲಿ ನಡೆದಿದೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದ ಖಾಸಗಿ ಆಸ್ಪತ್ರೆಯ ಬಳಿ...
ರಾಯಚೂರು : ಕೃಷಿ ಹಾಗೂ ತೋಟಗಾರಿಕೆಯ ಕೃಷಿ ಉಪಕರಣಗಳ ವಿತರಣೆಯಲ್ಲಿ ಶೇ 46 ಪರ್ಸೆಂಟ್ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ ಗಂಭೀರ ಆರೋಪ ಮಾಡಿದರು. ಸರಕಾರ ಕೃಷಿ ಪರಿಕರಗಳನ್ನು ರೈತರಿಗೆ ವಿತರಿಸಲು 350 ಕೋಟಿ ರೂ ನಿಗದಿ ಮಾಡಿದೆ. ಜಿಲ್ಲೆಯೊಂದಕ್ಕೆ ಪರಿಕರಗಳನ್ನು ಪೂರೈಕೆ ಮಾಡಲು 5 ಲಕ್ಷ ರೂ. ಲಂಚ ಕೊಡಬೇಕಂತೆ ಅಂದರೆ ಅಲ್ಲಿಗೆ 1.50 ಕೋಟಿ ರೂ. ಆಯಿತು. ಉಳಿದ ಹಣದಲ್ಲಿ ಗುಣಮಟ್ಟದ ಕೃಷಿ ಪರಿಕರಗಳನ್ನು ಕೊಡುವುದಕ್ಕೆ ಸಾಧ್ಯವೇ? ಹೀಗಾದರೆ ಕೃಷಿ ಉಳಿಯುವುದಾದರೂ ಹೇಗೆ. ಸರಕಾರದ ನಿಯಮಗಳನ್ನು ಪಾಲಿಸದ 350 ಜನರಲ್ಲಿ ಕೇವಲ 8-9 ಜನ ಮಾತ್ರವೇ ಕೃಷಿ ಪರಿಕರಗಳನ್ನು ಪೂರೈಕೆ ಮಾಡುತ್ತಿದ್ದಾರೆ ಎಂದು ಮಾಹಿತಿ ಲಭಿಸಿದೆ ಎಂದು ಅವರು ಹೇಳಿದರು. ನನಗೆ ಅನಾಮಧೇಯ ಅಪರಿಚತರೊಬ್ಬರ ನೀಡಿದ ಮಾಹಿತಿಯನ್ವಯ ಕೃಷಿ ಆಯುಕ್ತರಿಗೆ 20, ನಿರ್ದೇಶಕರಿಗೆ 20 ಹಾಗೂ...