K2 ನ್ಯೂಸ್ ಡೆಸ್ಕ್: ಹೊಸ ವರ್ಷದ ಹೆಸರಿನಲ್ಲಿ ಪಾರ್ಟಿಗಳ ನೆಪದಲ್ಲಿ ಪಾನಪ್ರಿಯರು ಹೊಟ್ಟೆಗೆ ಇಳಿಸಿಕೊಂಡ ಮಧ್ಯದ ಆದಾಯ ಸರ್ಕಾರಕ್ಕೆ ಬಂದಿದ್ದು 1200 ಕೋಟಿಗೂ ಅಧಿಕ. ಅಬಕಾರಿ ಇಲಾಖೆ...
K2 ಕ್ರೈಂ ನ್ಯೂಸ್ : ಕಲಬುರಗಿ ಯದುಲ್ಲಾ ಕಾಲೋನಿ ನಜಮೋದ್ದೀನ್ ಎಂಬುವವರ ಮನೆಯಲ್ಲಿ ಅಳಿವಿನ ಅಂಚಲ್ಲಿರುವ ಜಿಂಕೆ ಹಾಗೂ ನವಿಲು ಮಾಂಸ ಮಾರಾಟ ಮಾಡುತ್ತಿರುವ ಪ್ರಕರಣ ರೋಜಾ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ. ಪೊಲೀಸ್, ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಕಾರ್ಯಾಟರಣೆಯಲ್ಲಿ ಜಿಂಕೆ, ನವಿಲು ಬೇಟೆಗೆ ಬಳಸುತ್ತಿದ್ದ 0.22 ರೈಫಲ್, ಅದಕ್ಕೆ ಸಂಬಂಧಪಟ್ಟಂತಹ 113 ನಾಡತೂಸ್, 0. 117 ಏರ್‌ಗನ್, ತುಂಡರಿಸಲ್ಪಂಟ್ಟತಂಹ ನಾಲ್ಕಕ್ಕಿಂತ ಹೆಚ್ಚು ಜಿಂಕೆ, ಜಿಂಕೆ ಮರಿಗಳ ಮಾಂಸದ ರಾಶಿ, ಮಾಂಸ ಕಡಿಯಲು ಬಳಸುತ್ತಿದ್ದ ಬತಾಯಿ, ಚಾಕು ಸಾಮಗ್ರಿ, 2 ಜೊತೆ ಗಮ್ ಬೂಟ್, 2 ಮೊಬೈಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಐಡಿ ಅರಣ್ಯ ಘಟಕದ ಪಿಎಸ್‌ಐ ಜ್ಯೋತಿ ಜಪ್ತಿ ಮಾಡಿ ಆರೋಪಿಗಳಾದ ಸೈಯ್ಯದ್ ನಜಮೋದ್ದೀನ್, ಮೊಹ್ಮದ್ ಅಲ್ತಾಫ್, ಸಮೀ ಜುನೈದಿ ವಿರುದ್ಧ ರಾಷ್ಟ್ರೀಯ ವನ್ಯ ಜೀವಿಗಳ ಕಾಯ್ದೆ ಮತ್ತು ಆಯುಧ ನಿಯಮಗಳ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ....