ಸಿಂಧನೂರು : ವಿದ್ಯುತ್ ರಿಪೇರಿ ಕೆಲಸಕ್ಕೆಂದು ಕಂಬ ಏರಿ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ರಾಮರಡ್ಡಿ ಕ್ಯಾಂಪ್ ನಲ್ಲಿ ನಡೆದಿದೆ. ರಾಯಚೂರು ಜಿಲ್ಲೆಯಲ್ಲಿ ಸಿಂಧನೂರು ತಾಲೂಕಿನ ರಾಮರಡ್ಡಿ ಕ್ಯಾಂಪ್...
ರಾಯಚೂರು : ಮಾನ್ವಿ ತಾಲೂಕಿನ ಆರು ಖರೀದಿ ಕೇಂದ್ರಗಳಿಗೆ ತಡಕಲ್, ಬ್ಯಾಗವಾಟ್, ಹಿರೇಕೊಟ್ಟೆಕಲ್, ಮಾನ್ವಿ, ಪೋತ್ನಾಳ್ ಜೋಳ ಮಾರಾಟ ಮಾಡಿದ ರೈತರ ಹಣವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ...
ರಾಯಚೂರು : ಬಿಜೆಪಿ ಮುಖಂಡ ರವೀಂದ್ರ ಜಲ್ದಾರ್ ನಗರಸಭೆಗೆ ಆರ್ಥಿಕ ನಷ್ಟವಾಗುತ್ತಿದ್ದರು ಕೂಡ ನಗರಸಭೆ ಅಧ್ಯಕ್ಷರು ಮೌನವಹಿಸಿದ್ದಾರೆ ಕೂಡಲೇ ನಗರಸಭೆಯನ್ನು ಸೂಪರ್ ಸೀಡ್ ಮಾಡಬೇಕು ಎಂದು ರಾಯಚೂರು ನಗರ ಉಸ್ಮಾನಿಯಾ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎನ್.ಮಹಾವೀರ ಒತ್ತಾಯಿಸಿದರು. ರವೀಂದ್ರ ಜಲ್ದಾರ್ ಅವರು ಆದಾಯ ತೆರಿಗೆ ಇಲಾಖೆಗೆ ಮತ್ತು ಸರ್ಕಾರಕ್ಕೆ ತೆರಿಗೆ ವಂಚನೆ ಮಾಡುತ್ತಿದ್ದಾರೆ. ಇವರು ಬೊಳಮಾನದೊಡ್ಡಿ ರಸ್ತೆಯಲ್ಲಿರುವ ಆಶೀರ್ವಾದ ಲೇಔಟ್‌ನಲ್ಲಿ ಸುಮಾರು 1 ಕೋಟಿ 50 ಲಕ್ಷ ರೂ. ಭವ್ಯವಾದ ಬಂಗಲೆಯನ್ನು ಕಟ್ಟಿಸಿದ್ದಾರೆ. ಇವರು ತಮ್ಮ ಆದಾಯಕ್ಕಿಂತ ಕಡಿಮೆ ಆದಾಯ ತೋರಿಸಿ ತೆರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಹೊಲ,ಮನೆ ಮತ್ತು ಗುತ್ತಿಗೆದಾರರಿ ಕೆಲಸದಿಂದ ಕೊಟ್ಯಾಂತರರ ರೂಪಾಯಿ ಗಳಕೆ ಮಾಡಿ ತಾನೋಬ್ಬ ಕಂಪನಿಯಲ್ಲಿ ಕೆಲಸ ಮಾಡುವ ಸೂಪರ್ ವೈಸರ್ ಎಂದು ಆದಾಯ ತೆರಿಗೆ ಇಲಾಖೆಗೆ ಆದಾಯ ಪಾವತಿಸಿರುವುದು ಆದಾಯ ಇಲಾಖೆಯಿಂದ ತಿಳಿದು ಬಂದಿದೆ. ನಗರದ...
ಸಿರವಾರ : ಭಾರತದಲ್ಲಿರುವ ಜಾತಿ ವ್ಯವಸ್ತೆ, ಲಿಂಗ ಹಾಗೂ ಜಾತಿ ತಾರತಮ್ಯ ಹೋಗಲಾಡಿಸಿ ಸಮ ಸಮಾಜ ನಿರ್ಮಾಣ ಮಾಡುವಲ್ಲಿ ತನ್ನ ಜೀವನವನ್ನೆ ಮುಡಿಪಾಗಿ ಇಟ್ಟಿದ ಮಹಾನ್ ಮಾನವತಾ ವಾದಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಎಲ್ಲಾರನ್ನೂ ಬಿಟ್ಟು ಹೋಗಿರುವ ದಿನ ಇಂದು ಎಂದು ಧಮ್ಮ ದೀಪ ಚಾಲನಾ ಸಮಿತಿ ಅದ್ಯಕ್ಷ ಹನುಮಂತ ಹೇಳಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರ 66 ನೇ ಮಹಾ ಪರಿ ನಿರ್ವಾಹಣ ಅಂಗವಾಗಿ ಇಂದು ಪಟ್ಡಣದ ಮುಖ್ಯರಸ್ತೆಯಲ್ಲಿರುವ ನಾಮಪಲಕದ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಒಂದು ನಿಮಿಷ ಮೌನಾಚರಣೆ ಮಾಡಿ ನಂತರ ಮಾತನಾಡಿದ ಅವರು ಸಂವಿಧಾನ ಶಿಲ್ಪಿ, ಮಹಾಮಾನವತಾವಾದಿ ಹಾಗೂ ಸಮಾನತೆಯ ಹರಿಕಾರರಾದ ಭಾರತ ರತ್ನ ಬಾಬಾಸಾಹೇಬ್ ಡಾ ಬಿ.ಆರ್.ಅಂಬೇಡ್ಕರ್ ಅವರ 66ನೇ ಮಹಾಪರಿನಿರ್ವಾಣ ದಿನ. ಅಂಬೇಡ್ಕರ್ ಅವರು ಮಹಿಳೆಯರು ಹಕ್ಕುಗಳು, ಸಮಾತೆ ಹಾಗೂ ಶೋಷಿತ ವರ್ಗಗಳ ಹಕ್ಕಿಗಾಗಿ ಹೋರಾಡಿದ ಸಾಮಾಜದ ಮಹಾನ್ ಸುಧಾಕರು,ಅಸ್ಪೃಶ್ಯತೆ ನಿವಾರಿಸಿ ಸಮ ಸಮಾಜ ನಿರ್ಮಾಣಕ್ಕಾಗಿ...
K2 ನ್ಯೂಸ್ ಡೆಸ್ಕ್ : ಪ್ರಸ್ತುತ ಪರಿಸ್ಥಿತಿಯಲ್ಲಿ ದೇಶವನ್ನು ಭ್ರಷ್ಟಾಚಾರ ಮುಕ್ತ ಮಾಡಲು ಸಾಧ್ಯವಿಲ್ಲ. ಎಲ್ಲಾ ರಾಜಕೀಯ ಪಕ್ಷದ ನಾಯಕರು, ಭ್ರಷ್ಟಾಚಾರ ಮುಕ್ತ ದೇಶ ಮಾಡುತ್ತೇನೆ ಎನ್ನುವವರು ಆದ್ರೆ ಯಾರೂ ಮಾಡಲ್ಲ ಎಂದು ನಟ, ಪ್ರಜಾಕೀಯ ಸಂಸ್ಥಾಪಕ ಉಪೇಂದ್ರ ಎಂದರು. ನಿಜವಾದ ಪ್ರಣಾಳಿಕೆ ಅಂದ್ರೆ ಸಾರ್ವಜನಿಕರ ಎಲ್ಲಾ ಸಂಪತ್ತು ಮತ್ತು ತೆರಿಗೆ ಹಣದ ಸಂಪೂರ್ಣ ವಿವರಗಳನ್ನು ಪಾರದರ್ಶಕತೆಯಿಂದ ತೆರೆದಿಡಬಹುದಲ್ಲವೇ.. ? ಎಂದು ಅವರು ಪ್ರಶ್ನಿಸಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಎಲ್ಲಾ ರಾಜಕೀಯ ಪಕ್ಷದ ನಾಯಕರು, ಭ್ರಷ್ಟಾಚಾರ ಮುಕ್ತ ದೇಶ ಮಾಡುತ್ತೇನೆ ಎನ್ನುವವರು, ಸಾರ್ವಜನಿಕರ ಎಲ್ಲಾ ಸಂಪತ್ತು ಮತ್ತು ತೆರಿಗೆ ಹಣದ ಸಂಪೂರ್ಣ ಒಳ ಮತ್ತು ಹೋರ ಹರಿವಿನ ವಿವರ ಹಳ್ಳಿ, ವಾರ್ಡ್, ಜಿಲ್ಲೆ, ತಾಲೂಕು ಮಟ್ಟದಿಂದ ಸಾರ್ವಜನಿಕರಿಗೆ ಪಾರದರ್ಶಕತೆಯಿಂದ ತೆರೆದಿಡಬಹುದಲ್ಲವೇ..? ನಿಜವಾಗಿ ಬೇಕಾಗಿರುವ ಪ್ರಣಾಳಿಕೆ ! ಇದೆ ಎಂದು ಹೇಳಿದ್ದಾರೆ....