ರಾಯಚೂರು : ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸಬೇಕಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹಾಗೂ ಕೇಂದ್ರದ ಮಹತ್ವಾಂಕ್ಷೆ ಜಿಲ್ಲೆ ಒಂದಾಗಿದ್ದು ಅಗತ್ಯ ಮೂಲಭೂತ ಸೌಕರ್ಯ ಹೊಂದಿದೆ. ರಾಜ್ಯದ ಮುಖ್ಯಮಂತ್ರಿಗಳು...
ಮಾನ್ವಿ : ಪಟ್ಟಣದ ಬಾಷುಮಿಯಾ ಸಾಹುಕಾರ ಸರಕಾರಿ ಪ್ರಥಮದರ್ಜೆ ಕಾಲೇಜು ಸಭಾಂಗಣದಲ್ಲಿ ಕಾಲೇಜಿನ ಮಹಿಳಾ ಘಟಕ ಹಾಗೂ ಆಂತರಿಕಗುಣಮಟ್ಟ ಭರವಸೆ ಕೋಶ ವತಿಯಿಂದ ಲಿಂಗ ಸಮಾನತೆ ಕುರಿತು ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುರೇಶ ಶರಣಪ್ಪ ಪಾಟೀಲ್ ಮಾತನಾಡಿ ನಮ್ಮ ಸರಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಸೇರಿದಂತೆ ತೃತೀಯ ಲಿಂಗಿಗಳಿಗು ಕೂಡ ಯಾವುದೇ ತಾರತಮ್ಯವಿಲ್ಲದೆ ಉತ್ತಮ ಕಲಿಕಾ ವಾತವರಣವನ್ನು, ಗುಣಮಟ್ಟದ ಶಿಕ್ಷಣವನ್ನು ನೀಡುವ ಸೇವಾ ಮನೋಭಾವವುಳ್ಳ ಶಿಕ್ಷಕರಿಂದ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ಉಜ್ವಾಲ ಗೊಳ್ಳುವುದಕ್ಕೆ ಸಾಧ್ಯ ಎನ್ನುವುದಕ್ಕೆ ಸರಕಾರಿ ಕಾಲೇಜಿನಲ್ಲಿ ಶಿಕ್ಷಣ ಪಡೆದು ಅಶ್ವಥಾಮ ಪೂಜಾ ಶಿಕ್ಷಕಿಯಾಗಿ ಆಯ್ಕೆಯಾಗುವ ಮೂಲಕ ತಮ್ಮ ಜೀವನವನ್ನು ಭವಿಷ್ಯವನ್ನು ಉನ್ನತಗೊಳಿಸಿಕೊಳ್ಳುವುದರೊಂದಿಗೆ ರಾಜ್ಯದ ತೃತೀಯ ಲಿಂಗಿಗಳಿಗೂ ಸ್ಪೂರ್ತಿಯಾಗಿ ಸಮಾಜದಲ್ಲಿ ಲಿಂಗ ಸಮಾನತೆ ಮೂಡಲು ಕಾರಣರಾಗಿದ್ದು ವಿದ್ಯಾರ್ಥಿಗಳು ಇವರ ಜೀವನ ಹಾಗೂ ಸಾಧನೆಯನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳುವ ಮೂಲಕ ಜೀವನದಲ್ಲಿ...
ರಾಯಚೂರು : ನಗರದ ಯರಮರಸ್ ನಲ್ಲಿ ರಾಜ್ಯಮಟ್ಟದ ಆಹ್ವಾನಿತ ಪುರುಷ ಮಹಿಳೆಯರ ಖೋ-ಖೋ ಪಂದ್ಯಾವಳಿಗೆ ಶಾಸಕ ಶಿವರಾಜ್ ಪಾಟೀಲರಿಂದು ಚಾಲನೆ ನೀಡಿದರು. ಜಿಲ್ಲಾ ಖೋ-ಖೋ ಆಸೋಸಿಯೇಷನ್ , ಆದಿಬಸವೇಶ್ವರ ಸ್ಪೋಟ್೯ ಕ್ಲಬ್ ಸಂಯುಕ್ತಾಶ್ರಯದಲ್ಲಿ ರಾಜ್ಯ ಖೋ-ಖೋ ಸಂಸ್ಥೆಯ ಸಹಭಾಗಿತ್ವದಲ್ಲಿ 3 ದಿನಗಳ ಕಾಲ ಈ ಪಂದ್ಯಾವಳಿಗಳು ಜರುಗಲಿವೆ. ಈ ವೇಳೆ ಮಾತನಾಡಿದ ನಗರ ಶಾಸಕ ಶಿವರಾಜ್ ಪಾಟೀಲ್ ಕ್ರೀಡೆಯು ಜೀವನದ ಅವಿಭಾಜ್ಯ ಅಂಗವಾಗಿದ್ದು ಜಿಲ್ಲೆಯ ಪ್ರತಿಭೆಗಳಿಗೆ ಉತ್ತಮ ಅವಕಾಶವಾಗಿದ್ದು , ಇಲ್ಲಿನ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿಯೂ ಮಿಂಚಲಿ ಎಂದರು. ಈ ಪಂದ್ಯವಾಳಿಯ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದೇವದುರ್ಗ ಶಾಸಕ ಶಿವನಗೌಡ ನಾಯಕ್ ಹಾಗೂ ಜಿಲ್ಲಾ ಪ್ರಭಾವಿ ಕಾಂಗ್ರೆಸ್ ಮುಖಂಡರಾದ ಎನ್.ಎಸ್ ಬೋಸರಾಜ್ ರವರು ಕ್ರೀಡಾಪಟುಗಳಿಗೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಹಲವು ರಾಜಕೀಯ ಮುಖಂಡರು , ವಿವಿಧ ಜಿಲ್ಲೆಯ ಕ್ರೀಡಾಳುಗಳು ಉಪಸ್ಥಿತರಿದ್ದರು....