ಚಲಿಸುತ್ತಿದ್ದ ಕಾರಿಗೆ ಏಕಾಏಕಿ ಬೆಂಕಿ : ಸುಟ್ಟು ಕರಕಲಾದ ಕಾರು
ರಾಯಚೂರು: ಚಾಲಿಸುತ್ತಿದ್ದ ಕಾರಿಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ನಗರದ ಆಶ್ರಯ ಕಾಲೋನಿ ಹತ್ತಿರ ಬರುವ ಮುರಾರ್ಜಿ ಶಾಲೆ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ಜರುಗಿಲ್ಲ. ನಗರದ ಹೊರವಲಯದ ಹೊಸ ಆಶ್ರಯ ಕಾಲೋನಿ ಮುರಾರ್ಜಿ ಶಾಲೆ ಹತ್ತಿರ ಘಟನೆ ಜರುಗಿದೆ. ಚಂದ್ರಬಂಡಾದಿಂದ ರಾಯಚೂರು ಕಡೆ ಹೊರಟಿದ್ದ ಕಾರ್‌ನಲ್ಲಿ ಸುಟ್ಟ ವಾಸನೆ ಬಂದಿದೆ ಕೂಡಲೇ ಕಾರಿನಲ್ಲಿ ಇದ್ದ ನಾಲ್ವರು ಇಳಿದಿದ್ದಾರೆ. ಕಾರಿನಿಂದ ಇಳಿಯುತ್ತಿದ್ದಂತೆ ಬೆಂಕಿ ಇಡೀ ಕಾರಿಗೆ ವ್ಯಾಪಿಸಿಕೊಂಡಿದೆ. ಆಂಧ್ರ ಪಾಸಿಂಗ್ ಹೊಂದಿರುವ AP-21 P-0125 ಟಾಟಾ ಇಂಡಿಕಾ ಕಾರು ಇದಾಗಿದ್ದು, ಶ್ರೀನಿವಾಸ್ ಎಂಬುವವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಈ ಘಟನೆಯಿಂದ ಸುತ್ತಮುತ್ತಲಿನರುವ ನಿವಾಸಿಗಳಿಗೆ ಕೊಂಚ ಆತಂಕವನ್ನು ಉಂಟು ಮಾಡಿತ್ತು. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ದೌವಡಹಿಸಿ ಬೆಂಕಿ ನಂದಿಸುವಲ್ಲಿ ಯಶ್ವಸಿಯಾಗಿದ್ದಾರೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ...