ದೇವದುರ್ಗ : ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಹಾಕುವುರಿಂದ ನಾನಾ ರೋಗ ಆವರಿಸುವ ಜತೆಗೆ ಆರ್ಥಿಕ ಹೊರೆ ಬೀಳಲಿದೆ. ರೋಗ ರಹಿತ ಹಾಗೂ ಕಡಿಮೆ ಖರ್ಚಿನಲ್ಲಿ ಎರೆಹುಳು ಹಾಗೂ ದನದ ಗೊಬ್ಬರ ಬಳಸಿದರ ಉತ್ತಮ ಇಳುವರಿ ಬರಲಿದೆ ಎಂದು ರಾಯಚೂರು ಕೃಷಿ ವಿಜ್ಞಾನಗಳ ವಿವಿ ನಿವೃತ್ತ ಡೀನ್ ಡಾ.ಎಂ.ಭೀಮಣ್ಣ ತಿಳಿದರು. ಪಟ್ಟಣದ ಬಿಎಚ್ ಕಲ್ಯಾಣ ಮಂಟಪದಲ್ಲಿ ತಾಲೂಕು ಕೃಷಿಕ ಸಮಾಜ, ಕೃಷಿ ಇಲಾಖೆ, ರಾಯಚರು ಕೃಷಿ ವಿಜ್ಞಾನಗಳ ವಿವಿ, ಕೃಷಿ ತಂತ್ರಜ್ಞಾನರ ಸಂಸ್ಥೆಯಿಂದ ಆಯೋಜಿಸಿದ್ದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ, ಕಿಸಾನ್‌ಗೋಷ್ಠಿ ಹಾಗೂ ಮೆಣಸಿನಕಾಯಿ ಬೇಸಾಯ ತರಬೇತಿ ಕಾರ್ಯಕ್ರಮದಲ್ಲಿ ಸೋಮವಾರ ಉಪನ್ಯಾಸ ನೀಡಿದರು. ರೈತರು ಮಿಶ್ರಬೆಳೆ ಪದ್ಧತಿ ಅನುಸರಿಸಬೇಕು. ಅದರ ಜತೆ ಕುರಿಸಾಕಣೆ, ಕೋಳಿ ಹಾಗೂ ಜಾನುವಾರುಗಳ ಸಾಕಣೆ ಮಾಡಬೇಕು. ಇವುಗಳಿಂದ ಪರ್ಯಾಯ ಆದಾಯದ ಜತೆ ಗೊಬ್ಬರ ಸಿಗಲಿದೆ ಎಂದರು. ಕೀಟಶಾಸ್ತ್ರಜ್ಞ ಡಾ.ಅರುಣ್‌ಕುಮಾರ ಹೊಸಮನಿ ಮಾತನಾಡಿ, ಮೆಣಸಿನಕಾಯಿ ಬೆಳೆಯಲ್ಲಿ...