This is the title of the web page
This is the title of the web page

archiveಉಪಯೋಗ

Local News

ಬಿಸಿ ಊಟಕ್ಕೆ ಕೊಳೆತ ತರಕಾರಿ ಉಪಯೋಗ ವಿದ್ಯಾರ್ಥಿಗಳ ಅಸಮಾಧಾನ

ರಾಯಚೂರು : ಮಕ್ಕಳಲ್ಲಿ ಅಪೌಷ್ಟಿಕ ಪ್ರಮಾಣ ನಿವಾರಣೆಗಾಗಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಪೌಷ್ಠಿಕ ಆಹಾರ ನೀಡಬೇಕು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೋಟ್ಯಾಂತರ ರೂ ಖರ್ಚು ಮಾಡುತ್ತಿದ್ದು, ದೇವರು ವರವನ್ನು ಕೊಟ್ಟರು ಪೂಜಾರಿ ನೀಡಲಿಲ್ಲ ಎನ್ನುವ ಹಾಗೆ ಮಕ್ಕಳ ಹೊಟ್ಟೆ ಸೇರಬೇಕಿದ್ದು ಆಹಾರ ಪದಾರ್ಥಗಳು ಅಡುಗೆ ಸಹಾಯಕರ ಪಾಲಾಗುತ್ತಿದ್ದು, ಮಕ್ಕಳಿಗೆ ಕೊಳೆತ ತರಕಾರಿಗಳ ಆಹಾರವೇ ಗತಿ ಎನ್ನುವ ಸ್ಥಿತಿ ನಗರದ ಗಾಜಗಾರಪೇಟೆ ಸರ್ಕಾರಿ ಶಾಲೆಯ ಮಕ್ಕಳದಾಗಿದೆ. ನಗರದ ಗಾಜಗಾರಪೇಟೆ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಕೆಯಲ್ಲಿ ಕೊಳೆತ ತರಕಾರಿಗಳ ಬಳಕೆ ಮಾಡಿ ಆಹಾರ ಪ್ರತಿ ನಿತ್ಯ ತಯಾರಿಸಲಾಗುತ್ತಿದ್ದು, ಗುಣಮಟ್ಟದ ಆಹಾರ ತಯಾರಿಸಿ ಎಂದು ಶಾಲೆಯ ಮಕ್ಕಳು ಪ್ರಶ್ನಿಸಿದರೆ ಅಡುಗೆ ತಯಾರಿಕೆ ಸಿಬ್ಬಂದಿಗಳು ಮಕ್ಕಳ ಮೇಲೆ ದಬ್ಬಾಳಿಕೆ ಮಾಡುತ್ತಾರೆ ಎನ್ನುವ ಆರೋಪ ಕೇಳಿಬಂದಿದೆ ಅಲ್ಲದೆ ಪ್ರತಿ ನಿತ್ಯ ಶಾಲೆಯಿಂದ ಆಹಾರ ಪದಾರ್ಥಗಳನ್ನು ಮನೆಗೆ...