
K2 ನ್ಯೂಸ್ ಡೆಸ್ಕ್: ಸುಮಾರು 500ಕ್ಕೂ ಹೆಚ್ಚು ಶಿಕ್ಷಕರು ಮೋದಿ ಕೇರ್ ಚೈನ್ ಲಿಂಕ್ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ. ತಮ್ಮ ವೃತ್ತಿಯನ್ನು ದುರ್ಬಳಕೆ ಮಾಡಿಕೊಂಡು ತಿಂಗಳಿಗೆ 10,000 ರೂ.ಗಳಿಂದ 12 ಸಾವಿರ ರೂಪಾಯಿ ಕಮಿಷನ್ ಪಡೆದು ದಂಧೆ ನಡೆಸುತ್ತಿರುವ ಆರೋಪದಡಿ ಎಂಟು ಜನ ಶಿಕ್ಷಕರನ್ನು ಅಮಾನತು ಮಾಡಲಾಗಿದೆ.
ಮಕ್ಕಳ ಭವಿಷ್ಯವನ್ನು ರೂಪಿಸಬೇಕಾದ ಚಿತ್ರದುರ್ಗ ಜಿಲ್ಲೆಯ ಶಿಕ್ಷಕರು ತಮ್ಮ ವೃತ್ತಿಯನ್ನು ದುರುಪಯೋಗಪಡಿಸಿಕೊಂಡು, ರಾಜ್ಯಾದ್ಯಂತ ಮೋದಿ ಕೇರ್ನಲ್ಲಿ ಭಾಗಿಯಾಗಿ ವ್ಯವಹಾರ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.
ಒಟ್ಟಾರೆ ಹಣದಾಸೆಗೆ ಸಿಲುಕಿದ ಶಿಕ್ಷಕರು ಖಾಸಗಿ (ಮೋದಿಕೇರ್) ಕಂಪನಿಯ ಹೆಸರಲ್ಲಿ ಚೈನ್ ಲಿಂಕ್ ಬಿಸಿನೆಸ್ ಮಾಡಿ ಪಾಠ ಮಾಡುವ ಪುಣ್ಯದ ಕೆಲಸ ಕಳೆದು ಕೊಂಡಿದ್ದಾರೆ. ಇನ್ನಾದ್ರು ಇಂತಹ ಚೈನ್ ಲಿಂಕ್ ಬಿಸಿನೆಸ್ ನಂಬಿ ನಿಷ್ಠೆಯಿಂದ ಪಾಠ ಮಾಡೊದನ್ನ ಬಿಡದಿರಲಿ ಅನ್ನೋದು K2 ಆಶಯವಾಗಿದೆ.
![]() |
![]() |
![]() |
![]() |
![]() |
[ays_poll id=3]