K2kannadanews.in
Assault government officer ದೇವದುರ್ಗ : ತಹಶೀಲ್ದಾರ್ (thashildar) ಕಚೇರಿಯ ಕಂದಾಯ (Revenue) ನಿರೀಕ್ಷಕರ ಮೇಲೆ ಶಾಸಕರ (MLA supporter) ಬೆಂಬಲಿಗನಿಂದ ಹಲ್ಲೆ ಆರೋಪ ಕೇಳಿಬಂದಿದೆ.
ರಾಯಚೂರು (Raichur) ಜಿಲ್ಲೆಯ ದೇವದುರ್ಗ (Devadurga) ವಿಧಾನಸಭಾ ಕ್ಷೇತ್ರದ ಶಾಸಕಿ ಕರೆಮ್ಮ ಜಿ ನಾಯಕ್ ಬೆಂಬಲಿಗ, ಜೆಡಿಎಸ್ (JDS) ಮುಖಂಡ ಶಾಲಂ ಉದ್ದಾರ್ ಎಂಬುವರು, ದೇವದುರ್ಗ ತಹಶೀಲ್ದಾರ್ ಕಚೇರಿಯ ಕಂದಾಯ ನಿರೀಕ್ಷಕ ( R.I ) ಭೀಮನಗೌಡ ಮೇಲೆ ಹಲ್ಲೆ (Attack) ಮಾಡಿದ್ದರೆ ಎಂದು ಆರೋಪ ಮಾಡಲಾಗುತ್ತಿದೆ. ಮಾಜಿ ಸೈನಿಕರೂ ಆಗಿರುವ ಆರ್.ಐ ಭೀಮನಗೌಡ ಅವರ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕೊರಳಪಟ್ಟಿ ಹಿಡಿದು ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ಅಧಿಕಾರಿ ತಿಳಿಸಿದ್ದಾರೆ.
ಇನ್ನೂ ಹಲ್ಲೆ ಮಾಡಿರುವ ಬಗ್ಗೆ ತಹಸೀಲ್ದಾರ್ ಚೆನ್ನಮಲ್ಲಪ್ಪ ಘಂಟಿ ಅವರಿಗೆ ದೂರು ನೀಡಿದರೂ ಕ್ರಮ ಜರುಗಿಸುತ್ತಿಲ್ಲ ಎಂದು ಮೇಲಾಧಿಕಾರಿ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದೆ. ಅಪರಿಚಿತ ವ್ಯಕ್ತಿಯನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಪುರಸಭೆ ಸದಸ್ಯ ಶಾಲಂ ಉದ್ದಾರ್ ಮನವಿ ಮಾಡಿದ್ದರು, ದಾಖಲೆ ಸರಿಯಿಲ್ಲವೆಂದು ಕಂದಾಯ ನಿರೀಕ್ಷಕ ಮಾಜಿ ಸೈನಿಕ ಭೀಮನಗೌಡರಿಂದ ಅರ್ಜಿ ತಿರಸ್ಕಾರ ಮಾಡಲಾಗಿತ್ತು. ಇದೇ ಸಿಟ್ಟಿಗೆ ಅಧಿಕಾರಿ ಎಂಬುದನ್ನೂ ಲೆಕ್ಕಿಸದೆ ಶಾಲಂ ಉದ್ದಾರೆ ಹಲ್ಲೆ ಮಾಡಿದ್ದಾನೆ. ಓರ್ವ ಸರ್ಕಾರಿ ಅಧಿಕಾರಿ ಮೇಲೆ ಅಲ್ಲಿ ಆಗಿದ್ದು, ಮೇಲಾಧಿಕಾರಿ ಗಮನಕ್ಕೆ ತಂದರು ಕ್ರಮ ಆಗುತ್ತಿಲ್ಲ ಹಾಗಾಗಿ ನ್ಯಾಯಕ್ಕಾಗಿ ಆರ್.ಐ ಭೀಮನಗೌಡ ಆಗ್ರಹಿಸಿದ್ದಾರೆ.