K2kannadanews.in
News Desk ನಾಸ : ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರನ್ನು ನಾಸಾ ಹಾಗೂ ಸ್ಪೇಸ್ ಎಕ್ಸ್ ಜಂಟಿಯಾಗಿ 9 ತಿಂಗಳ ನಂತರ ಭೂಮಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಪೇಸ್ಎಕ್ಸ್ ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸುಲ್ ನೌಕೆ ಮೂಲಕ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಭೂಮಿಗೆ ಮರಳಿದ್ದಾರೆ.
ಭಾರತೀಯ ಕಾಲಮಾನದ ಪ್ರಕಾರ ಇಂದು ಬೆಳಗಿನ ಜಾವ 3.27ರ ಸುಮಾರಿಗೆ ಫ್ಲೋರಿಡಾದ ಸಮುದ್ರದ ಮೇಲೆ ಲ್ಯಾಂಡ್ ಆಗಿದ್ದಾರೆ. 8 ದಿನದ ಮಿಷನ್ 9 ತಿಂಗಳಿಗೆ ವಿಸ್ತರಣೆಯಾಗಿತ್ತಿ. ಬೋಯಿಂಗ್ ಸ್ಟಾರ್ಲೈನರ್ ನೌಕೆ ಮೂಲಕ 8 ದಿನಗಳ ಅಧ್ಯಯನ ಮಿಷನ್ಗಾಗಿ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಬಾಹ್ಯಾಕಾಶಕ್ಕೆ ತೆರಳಿದ್ದರು. ಜೂನ್ 5 ರಂದು ನೌಕೆ ಉಡಾವಣೆಗೊಂಡಿತ್ತು. ನಾಸಾ ವೇಳಾಪಟ್ಟಿ ಪ್ರಕಾರ ಜೂನ್ 14 ರಂದು ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಭೂಮಿಗೆ ಮರಳಬೇಕಿತ್ತು. ಆದರೆ ಬೋಯಿಂಗ್ ಸ್ಟಾರ್ಲೈನ್ ನೌಕೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಹೀಲಿಯಂ ಸೋರಿಕೆ ಸರಿಪಡಿಸುವ ಪ್ರಯತ್ನಗಳು ನಡೆದಿತ್ತು. ಹೀಗಾಗಿ ಗಗನಯಾತ್ರಿಗಳು ಮರಳುವ ದಿನಾಂಕ ಹಂತ ಹಂತವಾಗಿ ಮುಂದೂಡುತ್ತಲೇ ಹೋಗಿತ್ತು.