This is the title of the web page
This is the title of the web page
Local NewsVideo News

ಅದ್ದೂರಿಯಾಗಿ ಜರುಗಿದೆ ಸೂಗೂರೇಶನ ಜೋಡು ರಥೋತ್ಸವ..


K2kannadanews.in

ರಾಯಚೂರು : ಐತಿಹಸಿಕ ಶ್ರೀ ಸೂಗೂರೇಶ್ವರ ದೇವಸ್ಥಾನದ ( Historical sugureshwar temple) ಜೋಡು ರಥೋತ್ಸವ, ಅದ್ದೂರಿಯಾಗಿ ಲಕ್ಷಾಂತರ ಭಕ್ತರ (Divots) ಸಮೂಹದಲ್ಲಿ ಜರುಗಿತು. ರಾಜ್ಯದ ವಿವಿಧ ಜಿಲ್ಲೆ ಸೇರಿ ಆಂದ್ರ ( Andrea), ತೆಲಾಂಗಾಣ (telangana), ಮಹಾರಾಷ್ಟ್ರದ ( Maharashtra) ಭಕ್ತರು, ರಥೋತ್ಸವ ಜಾತ್ರಾ ವೈಭವವನ್ನು ಕಣ್ತುಂಬಿಕೊಂಡು, ಸೂಗೂರೇಶ್ವರನ ಆಶಿರ್ವಾದಕ್ಕೆ ( blessing) ಪಾತ್ರರಾದರು. ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ.

ಹೌದು ರಾಯಚೂರು ತಾಲೂಕಿನ ದೇವಸುಗೂರು ಗ್ರಾಮದಲ್ಲಿ, ಈ ಒಂದು ಐತಿಹಾಸಿಕ ಶ್ರೀ ಸೂಗುರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಜರುಗಿತು. ಜಾತ್ರೆ ಅಂಗವಾಗಿ ಜೋಡು ರಥೋತ್ಸವದ ಮೂಲಕ ಅದ್ದೂರಿಯಾಗಿ ತೆರೆ ಎಳೆಯಲಾಯಿತು. ಕಾರ್ತಿಕ ಮಾಸದ‌ ಬಳಿಕ ಛಟ್ಟಿ ಅಮಾವಾಸ್ಯೆಯ, ಆರನೇ ದಿನದಂದು ನಡೆಯುವ ಶ್ರೀ ಸೂಗೂರೇಶ್ವರನ ಜೋಡು ರಥೋತ್ಸವ ಜರುಗಿತು. ಜಾತ್ರೆಯ ಹಿನ್ನಲೆ ಬೆಳಗ್ಗೆಯಿಂದಲೇ ಶ್ರೀ ಸೂಗೂರೇಶ್ವರನಿಗೆ ಮಹಾರುದ್ರಭಿಷೇಕಾ, ಮಹಾಪೂಜೆ ಸೇರಿ ವಿವಿಧ ಪೂಜೆ-ಕೈಂಕಾರ್ಯಗಳು ನೆರವೇರಿದವು.

https://publicnext.com/article/nid/Raichur/Cultural-Activity/Religion/?lang=kn&node=923973

ಇನ್ನೂ ಸೂಗುರೇಶ್ವರನ ಸನ್ನಿಧಾನದಲ್ಲಿ ನಡೆಯುವ ಜೋಡು ರಥೋತ್ಸವ ನೋಡಲು, ರಾಜ್ಯ ಅಂತರ್ ರಾಜ್ಯಗಳಿಂದ ನವದಂಪತಿಗಳು ಆಗಮಿಸುವುದು ವಿಶೇಷವಾಗಿದೆ. ಮದುವೆಯಾದ ಹೊಸತರಲ್ಲಿ ಜೋಡಿ ರಥೋತ್ಸವ ನೋಡಿದರೆ, ಜೀವನ ಉತ್ತಮವಾಗಿರುತ್ತದೆ ಮತ್ತು ಬೇಡಿದ ಕೋರಿಕೆ ಈಡೇರಿಸುವ ಬಲವಾದ ನಂಬಿಕೆಯಿಂದ, ಇಲ್ಲಿ ಲಕ್ಷಾಂತರ ಭಕ್ತರು ಸೇರುತ್ತಾರೆ.

ಕಲ್ಯಾಣ ಕರ್ನಾಟಕ ಭಾಗದ ಎರಡನೇ ಅತಿ ದೊಡ್ಡ ಜನ ಸೇರುವ ಜಾತ್ರೋತ್ಸವ, ಎಂದು ಹೆಸರು ಪಡೆದ ಸೂಗೂರೇಶ್ವರನ ಜಾತ್ರೆಯು, ಜೋಡು ರಥೋತ್ಸವದೊಂದಿಗೆ ಅದ್ದೂರಿಯಾಗಿ ತೆರೆ ಬಿದ್ದಿದೆ. ಲಕ್ಷಾಂತರ ಭಕ್ತರು ಸೂಗೂರೇಶ್ವರನ ದರ್ಶನ ಪಡೆದು ಪುನೀತರಾದರು.


[ays_poll id=3]