This is the title of the web page
This is the title of the web page
Crime NewsNational NewsVideo News

ಶಿಕ್ಷಕನಿಂದ ಇದೆಂಥ ನೀಚ ಕೃತ್ಯ : ಬೆಚ್ಚಿಬೀಳಿಸುತ್ತದೆ ಸಿಸಿ ಟಿವಿ ದೃಶ್ಯಾವಳಿ


K2 ನ್ಯೂಸ್ ಡೆಸ್ಕ್ : ಒಬ್ಬ ವ್ಯಕ್ತಿಯ ಜೀವನದಲ್ಲಿ ಅತ್ಯುನ್ನತ ಸ್ಥಾನದಲ್ಲಿ ಇರುವವನೇ ಶಿಕ್ಷಕ. ಆದರೆ ಇತ್ತೀಚಿನ ದಿನಗಳಲ್ಲಿ ಆ ಒಂದು ಗುರುವಿನ ಸ್ಥಾನಕ್ಕೆ ಸಾಕಷ್ಟು ಚ್ಯುತಿ ಬರುವ ಕೆಲಸವಾಗುತ್ತಿದೆ. ಕಾಮುಕ ಶಿಕ್ಷಕರಿಂದ ಆ ಒಂದು ಸ್ಥಾನಕ್ಕೆ ಅಗೌರವ ಬರುತ್ತಿದೆ.

ಹೌದು ಉತ್ತರ ಪ್ರದೇಶದ ಮಥುರಾದಲ್ಲಿ ಶಿಕ್ಷಕನೊಬ್ಬ ವಿದ್ಯಾರ್ಥಿ ನಿಗೆ ಹಾಡು ಹಗಲೇ ಲೈಂಗಿಕ ಕಿರುಕುಳ ನೀಡಿದ ಘಟನೆ ಸಂಭವಿಸಿದೆ. ಈ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವರದಿಗಳ ಪ್ರಕಾರ ಸಂತ್ರಸ್ತೆ ತನಗೆ ಕಿರುಕುಳ ನೀಡಿದ ಶಿಕ್ಷಕನ ವಿರುದ್ಧ ಆರೋಪ ಮಾಡಿದ್ದಾಳೆ ಎನ್ನಲಾಗಿದೆ. ನಾನು ಈ ಘಟನೆ ಬಗ್ಗೆ ದೂರು ನೀಡಲು ಹೋಗಿದ್ದಕ್ಕೆ ಶಿಕ್ಷಕ ನನಗೆ ಬೆದರಿಕೆ ಹಾಕಿದ್ದಾರೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ಶಾಲೆ ಮುಗಿದ ಬಳಿಕ ಮನೆಗೆ ಹೋಗಬೇಡ ಇಲ್ಲೇ ಇರು ಎಂದು ಶಿಕ್ಷಕ ಗೋವಿಂದ್​ ಹೇಳಿದ್ದು, ಬಳಿಕ ಲೈಂಗಿಕ ಕಿರುಕುಳ ನೀಡಿದ್ದಾನೆ.

ವಿದ್ಯಾರ್ಥಿಯು ಸ್ಥಳೀಯ ಪೊಲೀಸ್​ ಠಾಣೆಗೆ ತೆರಳಿ ಆರೋಪಿ ಶಿಕ್ಷಕನ ವಿರುದ್ಧ ದೂರು ನೀಡಿದ್ದಾರೆ. ಆರೋಪಿ ಶಿಕ್ಷಕನನ್ನು ಗೋವಿಂದ್ ಎಂದು ಗುರುತಿಸಲಾಗಿದೆ. ಈತನ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ. ಕೋಸಿಕಲನ್​ ಪ್ರದೇಶದಲ್ಲಿರುವ ಪ್ರೌಢಶಾಲೆಯಲ್ಲಿ ಈ ಘಟನೆ ಸಂಭವಿಸಿದೆ ಅಂತಾ ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿ ಗೋವಿಂದ್​ ತಲೆಮರೆಸಿಕೊಂಡಿದ್ದಾನೆ.


[ays_poll id=3]