8 ತಾಲ್ಲೂಕುಗಳಲ್ಲಿ ಉಪನೋಂದಣಿ ಕಚೇರಿ
![]() |
![]() |
![]() |
![]() |
![]() |
K2 ನ್ಯೂಸ್ ಡೆಸ್ಕ್: ರಾಜ್ಯದಲ್ಲಿ 50 ತಾಲೂಕುಗಳನ್ನ ಘೋಷಣೆ ಮಾಡಿ ವರ್ಷಗಳೇ ಕಳೆದವೆ ಆದರೆ ಇದುವರೆಗೂ ಮೂಲಭೂತ ಸೌಲಭ್ಯಗಳು ಕೊಡಲು ಆಗುತ್ತಿಲ್ಲ ರಾಜ್ಯ ಸರ್ಕಾರಗಳಿಗೆ. ಇದೀಗ 50 ತಾಲೂಕುಗಳ ಪೈಕಿ ಎಂಟು ತಾಲೂಕುಗಳಲ್ಲಿ ಉಪನೋಂದಣಿ ಕಚೇರಿ ತೆರೆಯಲು ಆದೇಶ ಮಾಡಿದೆ.
ಹೊಸದಾಗಿ ರಚಿಸಲಾಗಿರುವ 50 ತಾಲ್ಲೂಕುಗಳ ಪೈಕಿ ಐದು ಜಿಲ್ಲೆಗಳ ಎಂಟು ತಾಲ್ಲೂಕುಗಳಲ್ಲಿ ಉಪ ನೋಂದಣಿ ಕಚೇರಿ ಆರಂಭಿಸಲು ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಬೆಳಗಾವಿಯ ಕಾಗವಾಡ, ಕೊಪ್ಪಳದ ಕುಕನೂರು ಮತ್ತು ಕನಕಗಿರಿ, ರಾಯಚೂರಿನ ಸಿರಿವಾರ, ಉಡುಪಿಯ ಕಾಪು, ವಿಜಯಪುರದ ಬಬಲೇಶ್ವರ, ತಿಕೋಟಾ ಮತ್ತು ತಾಳಿಕೋಟೆ ತಾಲ್ಲೂಕುಗಳಲ್ಲಿ ನೂತನವಾಗಿ ಉಪ ನೋಂದಣಿ ಕಚೇರಿ ಆರಂಭಿಸಲು ಒಪ್ಪಿಗೆ ನೀಡಿದೆ.
![]() |
![]() |
![]() |
![]() |
![]() |