UP : 5 ಕೆ.ಜಿ ಆಲೂಗೆಡ್ಡೆ ಲಂಚ ಕೇಳಿ ಕೆಲಸ ಕಳೆದುಕೊಂಡ ಸಬ್ ಇನ್ಸ್ಪೆಕ್ಟರ್

K 2 Kannada News
UP : 5 ಕೆ.ಜಿ ಆಲೂಗೆಡ್ಡೆ ಲಂಚ ಕೇಳಿ ಕೆಲಸ ಕಳೆದುಕೊಂಡ ಸಬ್ ಇನ್ಸ್ಪೆಕ್ಟರ್
WhatsApp Group Join Now
Telegram Group Join Now

K2kannadanews.in

bribe 5 kg potato ಉತ್ತರ ಪ್ರದೇಶ : ಅಧಿಕಾರಿಗಳು ಹಣನ್ನೋ ಆಭರಣನ್ನೋ ಲಂಚ ಪಡೆದು ಸಿಕ್ಕಿಬಿದ್ದ ಉದಾಹರಣೆಗಳಿವೆ. ಆದ್ರೆ ಇಲ್ಲೊಬ್ಬ ಪೊಲೀಸ್‌ ಅಧಿಕಾರಿ ರೈತನಿಂದ ಪಾರು ಮಾಡಲು ಆಲೂಗಡ್ಡೆ ಲಂಚವಾಗಿ ಪಡೆದುಕೊಂಡು ಅಮಾನತ್ತಾಗಿದ್ದಾರೆ. ಮೂರು ಕೆಜಿ ಆಲೂಗಡ್ಡೆಗಾಗಿ ಈಗಿರುವ ಹುದ್ದೆಯನ್ನೇ ಕಳೆದುಕೊಳ್ಳುವ ಸ್ಥಿತಿಯೂ ಎದುರಾಗಿದೆ.

ಉತ್ತರ ಪ್ರದೇಶದ ಕನ್ನೌಜ್‌ ಜಿಲ್ಲೆಯ ಭಾವಲ್‌ ಪುರ ಚಪುನ್ನಾ ಚೌಕಿ ಪೊಲೀಸ್‌ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ರಾಮಕೃಪಾಲ್‌ ಸಿಂಗ್‌ ಆಲುಗಡ್ಡೆ ಲಂಚ ಪಡೆದವರು ಎಂದು ತನಶಿಕ್ ಪಂಜಾಬಿ ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಆದರೇ ಇದು ಲಂಚಕ್ಕಾಗಿ ‘ಆಲೂಗಡ್ಡೆ’ ಎಂಬ ಪದವನ್ನು ಕೋಡ್‌ ಆಗಿ ಬಳಸಲಾಗಿದೆ ಎಂಬುದು ತನಿಖೆಯಿಂದ ಗೊತ್ತಾಗಿದೆ. ಸೌರಿಖ್ ಪೊಲೀಸ್ ಠಾಣೆ ವ್ಯಾಪ್ತಿಯ ಭವಲ್‌ಪುರ ಚಾಪುನ್ನಾ ಚೌಕಿಯಲ್ಲಿ ನಿಯೋಜನೆಗೊಂಡಿದ್ದ ಸಬ್‌ಇನ್‌ಸ್ಪೆಕ್ಟರ್‌ನನ್ನು ಅಮಾನತುಗೊಳಿಸಿ ಕನೌಜ್ ಎಸ್‌ಪಿ ಅಮಿತ್ ಕುಮಾರ್ ಆನಂದ್ ಆದೇಶ ಹೊರಡಿಸಿದ್ದಾರೆ.

ರೈತರೊಬ್ಬರಿಂದ 5 ಕೆಜಿ ಆಲೂಗಡ್ಡೆಗೆ ಬೇಡಿಕೆ ಇಡುತ್ತಾರೆ. ಈ ಬೇಡಿಕೆಯನ್ನು ಪೂರೈಸಲು ಕಷ್ಟ ಎಂದು ರೈತ ಹೇಳುತ್ತಾರೆ. 5 ಕೆಜಿ ಬದಲಿಗೆ 2 ಕೆಜಿ ನೀಡುತ್ತೇನೆಂದು ರೈತರ ಹೇಳುತ್ತಾರೆ. ಅದಕ್ಕೆ ಪೊಲೀಸ್‌ ಅಧಿಕಾರಿ ಕೋಪಗೊಂಡು, ನಂತರ ಅಂತಿಮವಾಗಿ ಒಪ್ಪಂದವನ್ನು 3 ಕೆಜಿಗೆ ಮಾಡಿಕೊಳ್ಳಲಾಯಿತು. ಈ ಸಂಬಂಧ ಇಲಾಖಾ ಪ್ರಕ್ರಿಯೆಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ ಎಂದಿ ಎಸ್ಪಿ ಹೇಳಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ನೆಟ್ಟಿಗರು ವ್ಯಾಪಕ ಚರ್ಚೆ ಆರಂಭಿಸಿದ್ದಾರೆ. 5 ಲಕ್ಷ ರೂ. ಅನ್ನು 5 ಕೆಜಿ ಆಲೂಗಡ್ಡೆಗೆ ಹೋಲಿಸಲಾಗಿದೆ ಪೊಲೀಸಪ್ಪನ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ.

WhatsApp Group Join Now
Telegram Group Join Now
Share This Article