ವಿದ್ಯಾರ್ಥಿನಿಗೆ ಕ್ಲಾಸಲ್ಲೇ ಚಾಕು ಇರಿದ ವಿದ್ಯಾರ್ಥಿ ಕಾರಣ ಏನು ಗೊತ್ತಾ.!
![]() |
![]() |
![]() |
![]() |
![]() |
K2 ಕ್ರೈಂ ನ್ಯೂಸ್ : ಪ್ರೀತಿ ಪ್ರೇಮದ ವಿಚಾರವಾಗಿ ವಿದ್ಯಾರ್ಥಿಯೊಬ್ಬ ಹಾಡು ಹಾಗಲೇ ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಚಾಕು ಇರಿದ ಘಟನೆ ನಡೆದಿದ್ದು ವಿದ್ಯಾರ್ಥಿನಿ ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆಯೊಂದು ನಡೆದಿದೆ ಎನ್ನಲಾಗುತ್ತಿದೆ.
ಬೆಂಗಳೂರಿನ ರಾಜಾನುಕುಂಟೆಯ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವಿದ್ಯಾರ್ಥಿಯೊಬ್ಬ ಹಾಡುಹಗಲೇ ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಚಾಕು ಇರಿದಿದ್ದು, ಆಕೆ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ. ವಿದ್ಯಾರ್ಥಿನಿಯನ್ನು ಕೊಂದ ಬಳಿಕ ವಿದ್ಯಾರ್ಥಿ ತಾನೂ ಚಾಕುವಿನಿಂದ ಇರಿದುಕೊಂಡಿದ್ದಾನೆ. ಪ್ರೀತಿ ಪ್ರೇಮದ ವಿಚಾರವೇ ಘಟನೆಗೆ ಕಾರಣ ಎನ್ನಲಾಗಿದೆ.
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ರಾಜಾನುಕುಂಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಗೆ ನಿಖರ ಕಾರಣವೇನು ಎಂಬುದು ತನಿಕೆಯಿಂದಲೇ ಹೊರ ಬರಬೇಕಿದೆ.
![]() |
![]() |
![]() |
![]() |
![]() |