
ರಾಯಚೂರು : ಸರಕಾರ ಹೊರಡಿಸಿರುವ ವಾರಬಂದಿ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಇಲ್ಲವಾದಲ್ಲಿ ಜನವರಿ 27ರಂದು ಸಿಂಧನೂರು ತಹಸಿಲ್ದಾರ್ ಕಚೇರಿ ಮುಂದೆ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಕರ್ನಾಟಕ ಪ್ರಾಂತ್ಯ ರೈತಸಂಘದ ಜಿಲ್ಲಾಧ್ಯಕ್ಷ ಡಿ.ವೀರನಗೌಡ ಎಚ್ಚರಿಸಿದರು.
ಧರಣಿಗೆ ಸ್ಪಂದಿಸದೇ ಇದ್ದರೆ 31 ರಂದು ರಸ್ತಾ ರೋಖೋ ಚಳುವಳಿಗಿಳಿದು ಸಂಚಾರ ತಡೆ ಮಾಡಿ ಸರಕಾರದ ಗಮನ ಸೆಳೆಯಲಾಗುವುದು ಸರಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದಲ್ಲಿ ಜಿಲ್ಲಾ ಬಂದ್ ಗೆ ಕರೆ ನೀಡುತ್ತೇವೆ ಎಂದರು. ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ನಡೆದ ಸಭೆಯ ನಡವಳಿಕೆಯಂತೆ ಈಗಿನ ನೀರಿನ ಮಾಪನೆಯನ್ನು ಬದಲಾಯಿಸಿ ಟೆಲಿ ಮೇಟರಿಕ್ ಸಿಸ್ಟಂ ಪ್ರಕಾರ ಕ್ಯೂಸಿಕಗಳಲ್ಲಿ ನೋದಾಯಿಸಬೇಕು. ನಮ್ಮ ಭಾಗದ ಪ್ರದೇಶಕ್ಕೆ ಬೇಕಾದ ಬಿಡುಗಡೆಯಾದ ನೀರಿನಲ್ಲಿ 75 ಪ್ರತಿದಷ್ಟು ನೀರನ್ನು ಮೇಲ್ 47 ರ ಗೇಜ್ ಮಾಪನೆಯಲ್ಲಿ ನೋಂದಾಯಿಸಬೇಕು ಎಂದು ಆಗ್ರಹಿಸಿದರು. ಸರಕಾರ ಕೆಳಭಾಗದ ರೈತರ ವಿಚಾರದಲ್ಲಿ ತೀರಾ ಉದಾಸೀನತೆ ತೋರುತ್ತಿರುವುದ ದುರದೃಷ್ಟಕರ.
ನಾವು ಮೇಲ್ಭಾಗದ ರೈತರು 24 ಪ್ರತಿಶತ ನೀರನ್ನು ಬಳಸಿಕೊಂಡು ಉಳಿದ ನೀರನ್ನು ಕೆಳಭಾಗದ ರೈತರಿಗೆ ಒದಗಿಸಬೇಕು. ಏಕೆಂದರೆ ಅಲ್ಲಿ ನೀರಾವರಿ ಒಳಪಟ್ಟಿರುವ ಭೂಮಿ ಕೇವಲ 1,19,000 ಎಕರೆ ಆದರೆ ಕೆಳಭಾಗದಲ್ಲಿ 3,85,000 ಎಕರೆ ಭೂಮಿಗೆ ನೀರಾವರಿಗೆ ಒಳಪಟ್ಟಿರುವುದು ಸರಕಾರದ ಗಮನಕ್ಕೆ ಇದ್ದರೂ ಮೇಲ್ಬಾಗದ ರೈತರಿಗೊಂದು ನ್ಯಾಯ ಹಾಗೂ ಕೆಳಭಾಗದ ರೈತರಿಗೆ ಒಂದು ನ್ಯಾಯ ನೀಡುವ ಮೂಲಕ ತಾರತಮ್ಯ ನೀತಿ ಅನುಸರಿಸಿತ್ತಿರುವುದನ್ನು ನಮ್ಮ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ನಮ್ಮ ಪಾಲಿನ ನೀರು ಪಡೆಯಲು ನಾವು ಸದಾ ಹೋರಾಟಕ್ಕೆ ಸಿದ್ಧರಿದ್ದೇವೆ ಎಂದು ಎಚ್ಚರಿಸಿದರು.
![]() |
![]() |
![]() |
![]() |
![]() |
[ays_poll id=3]