ಪ್ರಬಲ ಭೂಕಂಪ ಧರೆಗುರುಳಿದ ಗಗನಚುಂಬಿ ಕಟ್ಟಡಗಳು – ಭಯಾನಕ VIDEO ವೈರಲ್

K 2 Kannada News
ಪ್ರಬಲ ಭೂಕಂಪ ಧರೆಗುರುಳಿದ ಗಗನಚುಂಬಿ ಕಟ್ಟಡಗಳು – ಭಯಾನಕ VIDEO ವೈರಲ್
Oplus_16908288
WhatsApp Group Join Now
Telegram Group Join Now

K2kannadanews.in

EARTHQUAKE ಮ್ಯಾನ್ಮಾರ್‌ : ಪ್ರಬಲ ಭೂಕಂಪಕ್ಕೆ ಮ್ಯಾನ್ಮಾರ್‌ (Maynmar) ತತ್ತರಿಸಿದ್ದು, ಭೀಕರ ಭೂಕಂಪಕ್ಕೆ ಹಲವೆಡೆ ಗಗನಚುಂಬಿ ಕಟ್ಟಡಗಳು ನೆಲಸಮವಾಗಿದ್ದು, ಕೆಲ ಕಟ್ಟಡಗಳು ಬಿರುಕುಬಿಟ್ಟ ಘಟನೆ ಮ್ಯಾನ್ಮಾರ್‌ ನಲ್ಲಿ ನಡೆದಿದೆ.

ಹೌದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ (Center) ಪ್ರಕಾರ ಸಾಗಯಿಂಗ್ ನಗರದ (City) ವಾಯುವ್ಯಕ್ಕೆ ಭೂಮಿಯ 10 ಕಿ.ಮೀ ಆಳದಲ್ಲಿ ಕೇಂದ್ರಬಿಂದುವಿನಲ್ಲಿ ಪತ್ತೆಯಾಗಿದೆ. ಮ್ಯಾನ್ಮಾರ್‌ ಗಡಿ ದೇಶವಾಗಿರುವ ಭಾರತದ (India) ನವದೆಹಲಿಯಲ್ಲೂ ಭೂಮಿ ಕಂಪಿಸಿದ ಅನುಭವ ಆಗಿದೆ. ಶುಕ್ರವಾರ ಬೆಳಗ್ಗೆ 11:50ರ ಸುಮಾರಿಗೆ 7.7 ತೀವ್ರಯ ಭೂಕಂಪ ಸಂಭವಿಸಿದೆ. 12:50ರ ಸುಮಾರಿಗೆ 6.8 ತೀವ್ರತೆಯಲ್ಲಿ ಮತ್ತೊಂದು ಬಾರಿ ಭೂಕಂಪ ಸಂಭವಿಸಿದೆ. ಈ ವೇಳೆ ಅಲ್ಲಿ ಹಲವು ಗಗನಚುಂಬಿ ಕಟ್ಟಡಗಳು ನೆಲಸಮವಾಗಿದ್ದು, ಇನ್ನೂ ಹಲವು ಕಟ್ಟಡಗಳು ಬಿರುಕು ಬಿಟ್ಟಿವೆ. ಈ ಘಟನೆಯಲ್ಲಿ ಕನಿಷ್ಠ 43 ಕಾರ್ಮಿಕರು ನಾಪತ್ತೆಯಾಗಿದ್ದಾರೆ. ಎಷ್ಟು ಜನ ಮೃತಪಟ್ಟಿದ್ದಾರೆ ಎಂಬುದು ತಿಳಿದುಬಂದಿಲ್ಲ.

WhatsApp Group Join Now
Telegram Group Join Now
Share This Article