
K2 ನ್ಯೂಸ್ ಡೆಸ್ಕ್ : ಭಾರತದ ಜೊತೆಗೆ ನಾವು ಯುದ್ದಕ್ಕೂ ಸಿದ್ದರಿದ್ದೀವಿ ಅಂತ, ಅರ್ಥವ್ಯವಸ್ಥೆ ಹಳ್ಳಹಿಡಿದು, ಬೇರೆ ದೇಶಗಳ ಹತ್ರ ಕೈಚಾಚ್ತಾ ನಿಂತಿರೋ ಪಾಕಿಸ್ತಾನ ಈಗ ಯುದ್ದದ ಕನವರಕೆಯಲ್ಲಿದೆ. ನಮ್ಮ ಸೈನಿಕರಿಗೆ ಎರಡು ಹೊತ್ತು ಊಟ ಕೂಡ ಸಿಗ್ತಿಲ್ಲ ಅಂತ ಪಾಕ್ ಮಾಧ್ಯಮಗಳೇ ವರದಿ ಮಾಡ್ತಿವೆ.
ಆದ್ರೆ ಈ ಕಡೆ ಮಾತ್ರ ಅಗತ್ಯ ಬಿದ್ರೆ ಭಾರತದ ಜೊತೆಗೆ ನಾವು ಯುದ್ದಕ್ಕೂ ಸಿದ್ದರಿದ್ದೀವಿ ಅಂತ ಪಾಕ್‌ನ ಪ್ರಧಾನಿ ಹಾಗೂ ಅಲ್ಲಿನ ಸೇನೆ ಇಬ್ರೂ ಅಬ್ಬರದ ಭಾಷಣ ಮಾಡಿದ್ದಾರೆ. ಪುಲ್ವಾಮ ದಾಳಿಯ ನಂತರ ಭಾರತ ಹಾಗೂ ಪಾಕಿಸ್ತಾನದ ನಡುವೆ ನಡೆದ ವೈಮಾನಿಕ ಚಕಮಕಿ ಅಂದ್ರೆ ಬಾಲಾಕೋಟ್ ಏರ್ಸ್ಟ್ರೈಕ್, ಅದಾದ ಮೇಲೆ ನಡೆದ ಸಂಘರ್ಷ ಅದರ ವಾರ್ಷಿಕೋತ್ಸವದ ಅಂಗವಾಗಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಅದ್ರಲ್ಲಿ ಪಾಕಿಸ್ತಾನದ ಪ್ರಧಾನಿ ಹಾಗೂ ಅದರ ಸೇನಾ ನಾಯಕರು ಈ ಮಾತನ್ನ ಆಡಿದ್ದಾರೆ. ಪಾಕಿಸ್ತಾನ ಶಾಂತಿ ಪ್ರಿಯ ದೇಶ. ಈ ಶಾಂತಿ ಬಯಸುವ ರಾಷ್ಟ್ರದ ಸೈನ್ಯ ತನ್ನ ತಾಯ್ನಾಡಿನ ಒಂದಿಂಚೂ ಜಾಗವನ್ನ ರಕ್ಷಿಸೋಕೆ ಬದ್ದವಾಗಿದೆ. ಅಷ್ಟು ಮಾತ್ರ ಅಲ್ಲ, ಶತ್ರುಗಳ ವಿರುದ್ದ ಫೈಟ್ ಮಾಡೋಕೂ ಯಾವಾಗ್ಲೂ ರೆಡಿ ಇರ್ತವೆ ಅಂತ ಅಲ್ಲಿನ ಸೇನೆ ಹೇಳಿದೆ.
![]() |
![]() |
![]() |
![]() |
![]() |
[ays_poll id=3]