This is the title of the web page
This is the title of the web page
Local News

ಇಂಡಸ್ಟ್ರಿಗಳಲ್ಲಿ ಸೋಲಾರ್ ಸಿಸ್ಟಮ್ ಉಪಯುಕ್ತ


ರಾಯಚೂರು : ರಾಯಚೂರಿನಲ್ಲಿ ಸೋಲಾರ್ ಸಿಸ್ಟಮ್ ಅನ್ನು ಇಂಡಸ್ಟ್ರಿಗಳಲ್ಲಿ ಅಳವಡಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತದೆ ಎಂದು ಕಾಟನ್ ಮಿಲ್ಲರ್ಸ್ ಅಸೋಸಿಯೇಷನ್ ಅಧ್ಯಕ್ಷ ವಿ ಲಕ್ಷ್ಮರೆಡ್ಡಿ ಹೇಳಿದರು.

ವಿದ್ಯುತ್ ದರ ಹೆಚ್ಚಳ ಮಾಡಿದ್ದು ಖಂಡನೀಯ. ಎಚ್. ಟಿ.-2ಎ ಕೈಗಾರಿಕಾ ಸ್ಥಾವರಗಳಿಗೆ ನಿಗದಿತ ಶುಲ್ಕ ಮಾಸಿಕ ಪ್ರತಿ ಕೆ.ವಿ.ಎ.ಗೆ ಪ್ರಸ್ತುತ ರೂ.265 ಇದ್ದು,ಈಗಿನ ಪ್ರಸ್ತಾಪಿತ ದರ ರೂ550 ಕ್ಕೆ ಹೆಚ್ಚಿಸಲಾಗಿದೆ ಆದರೆ ಮಾಸಿಕ ಪ್ರತಿ ಕೆವಿಎಗೆ ರೂ.265 ರಂತೆ ಪಾವತಿಸುತ್ತಿದ್ದೇವೆ. ಈ ಹಿಂದೆ ರೂ.265 ಪ್ರತಿ ಕೆ.ವಿ. ಎ.ಗೆ ಹೆಚ್ಚಳ ಮಾಡಿರುವ ಹಿನ್ನೆಲೆ ಕಾಟನ್ ಜಿನ್ನಿಂಗ್ ಫ್ಯಾಕ್ಟರಿಗಳು ಸೀಜನಲ್ ಇಂಡಸ್ಟ್ರಿಗಳಾಗಿರುವುದರಿಂದ ಬಹಳಷ್ಟು ಹೊರೆಯಾಗುತ್ತದೆ ಎಂದರು.

ಪ್ರತಿ ಕೆ.ಪಿ.ಎ.ಗೆ ಯಥಾಪ್ರಕಾರ ರೂ. 265ರಂತೆ ತೆಗೆದುಕೊಂಡು ಪ್ರತಿ ಯೂನಿಟ್‌ಗೆ ರೂ.5.85 ಪೈಸೆಯಂತೆ ಕೊಟ್ಟರೆ ಸೀಜನಲ್ ಕಾಟನ್ ಜೆನ್ನಿಂಗ್ ಫ್ಯಾಕ್ಟರಿಗಳಿಗೆ ಸಾಕಷ್ಟು ಸಹಾಯವಾಗುತ್ತದೆ.
ಪ್ರತಿ ಕೆ.ಪಿ.ಎ.ಗೆ ರೂ.550 ರಂತೆ ಪಾವತಿಸುವಂತೆ ಒತ್ತಾಯಿಸಿದರೆ ನಮ್ಮ ಕಾಟನ್ ಜಿನ್ನಿಂಗ್ ಫ್ಯಾಕ್ಟರಿಗಳನ್ನು ಮುಚ್ಚುವ ಪರಿಸ್ಥಿತಿ ಬರುತ್ತದೆ. ಈ ರೀತಿ ಮಾಡುವುದರಿಂದ ಇಂಡಸ್ಟ್ರಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಉದ್ಯೋಗಿಗಳು ಹಾಗೂ ಕಾರ್ಮಿಕರು ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಎಂದರು.


[ays_poll id=3]