K2kannadanews.in
Accident news ರಾಯಚೂರು : ಎರಡು ಬೈಕ್ ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಾಹನ ಸವಾರರು ಸ್ಥಳದಲ್ಲೆ ಮೃತಪಟ್ಟ ಘಟನೆ ನಡೆದಿದೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಸಿಎಸ್ಎಫ್ ಚರ್ಚ್ ಬಳಿ ಘಟನೆ ನಡೆದಿದ್ದು. ಹಿಕ್ಕಿಹೊಡೆದ ರಬಸಕ್ಕೆ ಎರಡು ಬೈಕುಗಳ ಮುಂಭಾಗ ನಜ್ಜುಗುಜ್ಜಾಗಿವೆ. ಅಪಘಾತದಲ್ಲಿ ಸರ್ಕಾರಿ ಮಹಾವಿದ್ಯಾಲಯದ ವಿದ್ಯಾರ್ಥಿ ಶಕ್ಷವಲಿ (19) ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತೋರ್ವ ಮೃತ ಬೈಕ್ ಸವಾರನ ಹೆಸರು ತಿಳಿದು ಬಂದಿಲ್ಲ. ತಾಲ್ಲೂಕಿನ ದುಮುತಿ ಗ್ರಾಮದಿಂದ ಸಿಂಧನೂರಿನ ಕಾಲೇಜುಗೆ ಹೋಗುತ್ತಿದ್ದ ವಿದ್ಯಾರ್ಥಿ. ಜವಳಗೆರದಿಂದ ಸಿಂಧನೂರು ಮಾರ್ಗದಲ್ಲಿ ಜಮೀನಿಗೆ ಹೊರಟಿದ್ದ ಈ ವೇಳೆ ಎರಡು ಬೈಕ್ ಗಳು ಮುಖಾಮುಖಿ ಡಿಕ್ಕಿಯಾಗಿವೆ.
ಎರಡೂ ಶವಗಳನ್ನು ಸಿಂಧನೂರು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದ್ದು, ಕುಟುಂಬಸ್ಥರ ಆಕ್ರಾಂತನ ಮುಗಿಲು ಮುಟ್ಟಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸಿಂಧನೂರು ಗ್ರಾಮೀಣ ಪೋಲೀಸರು ಸ್ಥಳ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.