K2kannadanews.in
PDO Exam ಸಿಂಧನೂರು : ಸಿಂಧನೂರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಪಿಡಿಓ ಪರೀಕ್ಷೆಯಲ್ಲಿನ ಗೊಂದಲದಿಂದ ಎರಡನೇ ಪರೀಕ್ಷೆಯನ್ನು ವಿದ್ಯಾರ್ಥಿಗಳು ಬಹಿಷ್ಕರಿಸಿ ಪ್ರತಿಭಟನೆ ಮಾಡಿದ್ದಾರೆ.
ಇಂದು ರಾಜ್ಯಾದ್ಯಂತ ನಡೆದ ಪಿಡಿಓ ಪರೀಕ್ಷೆಯಲ್ಲಿ ಸಾಕಷ್ಟು ಕಡೆಗಳಲ್ಲಿ ಅನಹುತ ನಡೆದಿವೆ. ಸಾಕಷ್ಟು ಅಭ್ಯರ್ಥಿಗಳು ಪರೀಕ್ಷಯಿಂದ ಹೊರಗುಳಿದಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲೂ ಒಂದು ಎಡವಟ್ಟು ಜರುಗಿದೆ. ಇದರಿಂದ ಸುಮಾರು 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ.
ಈ ಒಂದು ಎಡವಟ್ಟಿನಲ್ಲಿ ಅಧಿಕಾರಿಗಳ ತಪ್ಪಿದೆ ಎಂದು ಅಭ್ಯರ್ಥಿಗಳು ಎರಡನೇ ಅವಧಿಯ ಪರಿಕ್ಷೆಯನ್ನೂ ಬಹಿಷ್ಕರಿಸಿ, ರಸ್ತೆತಡೆ ನಡೆಸಿ ಪ್ರತಿಭಟನೆ ಮಾಡಿ ಅಧಿಕಾರಿಗಳ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು. ಅಭ್ಯರ್ಥಿಗಳು ರಸ್ತೆ ತಡೆ ನಡೆಸಿದ್ದರಿಂದ ಸಾಕಷ್ಟು ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.