
K2 ಪೊಲಿಟಿಕಲ್ ನ್ಯೂಸ್ : ನರೇಂದ್ರ ಮೋದಿ ಕರ್ನಾಟಕಕ್ಕೆ ಹೆಚ್ಚಾಗಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಪಕ್ಷಕ್ಕೆ ನಡುಕ ಶುರುವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇಲ್ಲಿ ಗಮನಿಸಿದಾಗ ಆ ನಡುಕ ಶುರುವಾಗಿದ್ದು ಕಾಂಗ್ರೆಸ್ಗೆ ಅಲ್ಲ ಅದು ಬಿಜೆಪಿಗೆ ಎಂದು ಪ್ರಿಯಾಂಕ ಖರ್ಗೆ ರಿಯಾಕ್ಷನ್ ಕೊಟ್ಟಿದ್ದಾರೆ.
ಪ್ರತಿ ಬಾರಿಯೂ ಮೋದಿಯವರು ಬಂದಾಗ ಬಿಜೆಪಿಯವರಿಗೆ ಅಭಿವೃದ್ಧಿಯ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ, ಹಾಗಾಗಿ ಬಿಜೆಪಿಯವರಿಗೆ ಉತ್ತರವಿಲ್ಲದೆ ನಡುಕ ಶುರುವಾಗಿದೆ ಎಂದು ಕಲಬುರ್ಗಿ ನಗರದಲ್ಲಿ ಹೇಳಿದರು. ಶಾಸಕ ಹಾಗೂ ಮಂತ್ರಿಗಳಿಂದ ಮಾಡಬೇಕಾದ ಕೆಲಸ, ಇಂದು ಪ್ರಧಾನಮಂತ್ರಿ ಅವರ ಕೈಯಿಂದ ಮಾಡಿಸುತ್ತಿರುವುದು ನೋಡಿದರೆ, ಇಲ್ಲಿಯವರೆಗೆ ನೀವು ಯಾವ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿಲ್ಲ ಅಥವಾ ಯಶಸ್ವಿಯಾಗಿ ಮಾಡಿಲ್ಲ ಎಂದರ್ಥ ಎಂದು ಹೇಳಿದರು.
![]() |
![]() |
![]() |
![]() |
![]() |
[ays_poll id=3]