
K2 ಪೊಲಿಟಿಕಲ್ ನ್ಯೂಸ್ : ರಾಜ್ಯದಲ್ಲಿ ಚುನಾವಣೆ ವರ್ಷ ಆರಂಭವಾಗಿದ್ದು, ಇದೀಗ ಪರಸ್ಪರ ರಾಜಕೀಯ ಮುಖಂಡರುಗಳು ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಸಿದ್ದರಾಮಯ್ಯ ಸಿಟಿ ರವಿ ಅವರ ಜಗಳ ಮುಂದುವರೆದಿದ್ದು. ಸಿದ್ದರಾಮಯ್ಯ ಅವರಿಗೆ ಹೊಸ ಹೆಸರನ್ನು ನಾಮಕರಣ ಮಾಡಿದ್ದಾರೆ ಸಿಟಿ ರವಿ.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಾಯಿ ಬಿಟ್ಟರೆ ಸುಳ್ಳು ಹೇಳುತ್ತಾರೆ. ಹಾಗೆಂದು ಹೆಸರು ಇಟ್ಟಿದ್ದೇನೆ ಎಂದು ಸಿ.ಟಿ.ರವಿ ಹೇಳಿದ್ದಾರೆ. ನಾನು ಇಟ್ಟಿರುವ ಹೊಸ ಹೆಸರು ಸುಳ್ಳು ರಾಮಯ್ಯ ಎಂದು. ಸಿದ್ದರಾಮಯ್ಯ ಅವರನ್ನು ಸುಳ್ಳು ರಾಮಯ್ಯ ಎಂದು ಕರೆದರೇ ಸೂಕ್ತವಾಗುತ್ತದೆ. ಅಧಿಕಾರಕ್ಕೆ ಬಂದು, ಲೂಟಿ ಮಾಡಲು ಕಾಂಗ್ರೆಸ್‌ನವರು ಜೆಸಿಬಿ ಹಿಡಿದು ಕೂತಿದ್ದಾರೆ. ಆದರೆ ಮೋದಿ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ರವಿ ಹೇಳಿದ್ದಾರೆ.
![]() |
![]() |
![]() |
![]() |
![]() |
[ays_poll id=3]