
ರಾಯಚೂರು : ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸಬೇಕಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹಾಗೂ ಕೇಂದ್ರದ ಮಹತ್ವಾಂಕ್ಷೆ ಜಿಲ್ಲೆ ಒಂದಾಗಿದ್ದು ಅಗತ್ಯ ಮೂಲಭೂತ ಸೌಕರ್ಯ ಹೊಂದಿದೆ. ರಾಜ್ಯದ ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸಿದ್ದ ಭರವಸೆ ನೀಡಿದ್ದಾರೆ. ಜನಾರೋಗ್ಯ ರಕ್ಷಣೆಗಾಗಿ ಏಮ್ಸ್ ಸ್ಥಾಪಿಸಬೇಕು ಎಂದು ಸದನದಲ್ಲಿ ಶಾಸಕ ಡಾ.ಶಿವರಾಜ ಪಾಟೀಲ್ ಒತ್ತಾಯಿಸಿದರು.
ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಐಐಟಿ ಸ್ಥಾಪಿಸುವಾಗ ರಾಯಚೂರು ಹಾಗೂ ಧಾರವಾಡ ಹೆಸರು ಶಿಫಾರಸ್ಸು ಮಾಡಿದ್ದರಿಂದಲೇ ಐಐಟಿ ಜಿಲ್ಲೆಗೆ ತಪ್ಪಿ ಹೋಗಿದೆ. ಈಗಲೂ ಅದೇ ಅನ್ಯಾಯವಾಗಲು ಸರ್ಕಾರ ಮುಂದಾಗಬಾರದು. ಧಾರವಾಡ ಹುಬ್ಬಳ್ಳಿಯಲ್ಲಿಐಐಟಿ ಸೇರಿದಂತೆ ಅನೇಕ ವೈದ್ಯಕೀಯ ಕಾಲೇಜುಗಳಿವೆ. ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪನೆಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದರು. ಬೆಂಬಲಿಸಿ ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ ಸಹ ಧ್ವನಿಗೂಡಿಸಿ ಜಿಲ್ಲೆಗೆ ನಿರಂತರ ಆನ್ಯಾಯವಾಗುತ್ತಿರುವದನ್ನು ಸರಿಪಡಿಸಬೇಕೆಂದರು.
ಉತ್ತರ ಕರ್ನಾಟಕವೆಂದರೆ ಹುಬ್ಬಳ್ಳಿ, ಕಲ್ಯಾಣ ಕರ್ನಾಟಕವೆಂದರೆ ಕಲ್ಬುರ್ಗಿ ಎಂದು ಭಾವಿಸದೇ ರಾಯಚೂರಿಗೆ ಏಮ್ಸ್ ಮಂಜೂರಿಗೆ ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿದರು. ಕಾನೂನು ಸಚಿವ ಮಾಧುಸ್ವಾಮಿ ಮಾತನಾಡಿ ನಿನ್ನೆ ಸದನದಲ್ಲಿ ಶೂನ್ಯವೇಳೆಯಲ್ಲಿ ಉತ್ತರ ನೀಡಿದ್ದು, ಮತ್ತೊಮ್ಮೆ ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪನೆಗೆ ಕೇಂದ್ರಕ್ಕೆ ಪತ್ರ ಬರೆಯುವಂತೆ ಆಗ್ರಹಿಸಿದರು.
ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪಿಸಲು ಮತ್ತೊಂದು ಒತ್ತಾಯದ ಪತ್ರವನ್ನು ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಕಳುಹಿಸುವದಾಗಿ ಕಾನೂನು ಸಚಿವ ಮಾಧುಸ್ವಾಮಿ ಸದನದಲ್ಲಿ ಭರವಸೆ ನೀಡಿದ್ದಾರೆ.
![]() |
![]() |
![]() |
![]() |
![]() |
[ays_poll id=3]