ಸಿಂಧನೂರಿನಲ್ಲಿ ವಿವಿಧ ಅಂಗಡಿ, ಬ್ಯಾಂಕ, ಸಹಕಾರಿ ಸಂಘಗಳಲ್ಲಿ ಸರಣಿ ಕಳ್ಳತನ..

K 2 Kannada News
ಸಿಂಧನೂರಿನಲ್ಲಿ ವಿವಿಧ ಅಂಗಡಿ, ಬ್ಯಾಂಕ, ಸಹಕಾರಿ ಸಂಘಗಳಲ್ಲಿ ಸರಣಿ ಕಳ್ಳತನ..
WhatsApp Group Join Now
Telegram Group Join Now

K2kannadanews.in

Serial theft ಸಿಂಧನೂರು : ಕಳೆದ ರಾತ್ರಿ (last night) ನಗರದಲ್ಲಿ (city) ಸರಣಿಕಳ್ಳತನ (Serial theft) ಜರುಗಿದ್ದು, ನಗರ ವಾಸಿಗಳಲ್ಲಿ ಭಯ ಹುಟ್ಟಿಸಿದೆ. ಅಂಗಡಿ, ಬ್ಯಾಂಕ, ಸಹಕಾರಿ ಸಂಘ ಸೇರಿ ವಿವಿಧೆಡೆ ಸರಣಿ ಕಳ್ಳತನವಾಗಿದೆ.

ಹೌದು ರಾಯಚೂರು (Raichur) ಜಿಲ್ಲೆಯ ಸಿಂಧನೂರು (Sindhanur) ನಗರದಲ್ಲಿ ಘಟನೆ ಜರುಗಿದ್ದು, ನಗರದ ಪಿಕಾರ್ಡ್ ಬ್ಯಾಂಕ್ (Bank) ಸೇರಿದಂತೆ ಜೀವನಜ್ಯೋತಿ ಪತ್ತಿನ ಸಹಕಾರ ಸಂಘ, ಚಾರ್ಟೆಡ್ ಅಕೌಂಟೆಂಟ್ (Charted account), ಕೃಷಿ ಪತ್ತಿನ ಸಹಕಾರ ಸಂಘ, ಬಟ್ಟೆ ಅಂಗಡಿ, ಗೊಬ್ಬರದ ಗೌಡನ್, ಹಾಗೂ ಇನ್ನಿತರ ಅಂಗಡಿಗಳಲ್ಲಿ ಮಧ್ಯರಾತ್ರಿ ಖದೀಮರ ಕೈಚಳಕವನ್ನು ತೋರಿಸಿದ್ದು, ನಾಗರಿಕರಲ್ಲಿ ಆತಂಕ ಮೂಡಿದೆ.

ವಿಷಯ ತಿಳಿಯುತ್ತಿದ್ದಂತೆ ಸಿಂಧನೂರು ಉಪವಲಯದ ಡಿವೈಎಸ್ಪಿ ಬಿ.ಎಸ್.ತಳವಾರ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬ್ಯಾಂಕ್ ಮತ್ತು ಅಂಗಡಿ ಮುಂಗಟ್ಟುಗಳಲ್ಲಿ ಕಳ್ಳತನವಾಗಿದ್ದು, ಇದರ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿ ಶೀಘ್ರವಾಗಿ ಪ್ರಕರಣವನ್ನು ಬೇಧಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

 

 

WhatsApp Group Join Now
Telegram Group Join Now
Share This Article