
ರಾಯಚೂರು : ಅಖಿಲ ಕರ್ನಾಟಕ ಅಖಿಲ ಕರ್ನಾಟಕ ಹೂಗಾರ, ಗುರವ, ಜೀರ, ಪುಲ್ಲಾರಿ, ಪೂಜಾರ ಸೇವಾ ಮಹಾಸಭಾದ ರಾಜ್ಯಾಧ್ಯಕ್ಷರಾಗಿ ಲೋಚನೀಶ ಹೂಗಾರ, ಪ್ರಧಾನ ಕಾರ್ಯದರ್ಶಿಯಾಗಿ ವಿಶ್ವನಾಥ ಹೂಗಾರ ದೇವರಭೂಪೂರು ಸೇರಿ ವಿವಿಧ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ.
ಭಾನುವಾರ ಬೆಂಗಳೂರಿನ ಕರ್ನಾಟಕ ರಾಜ್ಯ ಪಟ್ಟಣ ಸಹಕಾರಿ ಕೋ-ಆಪರೇಟಿವ್ ಬ್ಯಾಾಂಕ್ ಸಭಾಂಗಣದಲ್ಲಿ ಜರುಗಿದ ಅಖಿಲ ಕರ್ನಾಟಕ ಹೂಗಾರ, ಗುರವ, ಜೀರ, ಪುಲ್ಲಾರಿ, ಪೂಜಾರ ಸೇವಾ ಸಂಘ ದ ರಾಜ್ಯ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ವಿವಿಧ ಪದಾಧಿಕಾರಿಗಳ ಆಯ್ಕೆೆ ಮಾಡಲಾಯಿತು.
ರಾಜ್ಯದ ವಿವಿಧ ಜಿಲ್ಲೆಯ ಜಿಲ್ಲಾಾ ಸಮಿತಿ ಅಧ್ಯಕ್ಷರು,ಹಿರಿಯರು, ಜಿಲ್ಲಾಾ ಪ್ರತಿನಿಧಿಗಳ ಸಭೆಯಲ್ಲಿ ಸಂಘದ ರಾಜ್ಯ ಗೌರವ ಅಧ್ಯಕ್ಷರಾಗಿ ಹನುಮಂತಪ್ಪ ಪೂಜಾರ ಜೇವರ್ಗಿ, ರಾಜ್ಯಾಾಧ್ಯಕ್ಷರಾಗಿ ಲೋಚನೀಶ್ ಹೂಗಾರ, ರಾಜ್ಯ ಕಾರ್ಯಾಧ್ಯಕ್ಷರಾಗಿ ಶಂಕರ ಹೂಗಾರ ಬೆಂಗಳೂರು, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ವಿಶ್ವನಾಥ ಹೂಗಾರ ದೇವರಭೂಪುರ ಇವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಇದೇ ವೇಳೆ ವಿವಿಧ ಜಿಲ್ಲೆಗಳ ಪ್ರತಿನಿಧಿಗಳನ್ನು ರಾಜ್ಯ ಉಪಾಧ್ಯಕ್ಷರನ್ನಾಗಿ ಹಾಗೂ ಸಂಘಟನಾ ಕಾರ್ಯದರ್ಶಿನ್ನು ಅವಿರೋಧವಾಗಿ ಆಯ್ಕೆ ಮಾಡಿ ರಾಜ್ಯದಲ್ಲಿ ಹೂಗಾರ ಸಮುದಾಯದ ಸಂಘಟನೆಗೆ ಮುಂದಾಗಬೇಕು ಎಂದು ಸಭೆಯಲ್ಲಿದ್ದ ಮುಖಂಡರು ಸಲಹೆ ನೀಡಿದರು. ಮುಂಬರುವ ದಿನಗಳಲ್ಲಿ ಸರ್ಕಾರದ ಮೇಲೆ ಒತ್ತಡ ತಂದು ಶ್ರೀ ಹೂಗಾರ ಮಾದಯ್ಯನವರ ಹೆಸರಲ್ಲಿ ಜಯಂತಿ ಆಚರಣೆ, ಅಭಿವೃದ್ದಿ ನಿಗಮ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಸಂಘಟಿತ ಹೋರಾಟ ರೂಪಿಸಲು ಸಭೆಯಲ್ಲಿ ನೀಡಿದ ಸಲಹೆಯನ್ನು ನೂತನ ಪದಾಧಿಕಾರಿಗಳು ಎಲ್ಲರ ಸಹಕಾರ, ಸಲಹೆ ಪಡೆದು ಸಂಘ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಎಚ್.ಬಿ.ಹೂಗಾರ ಬೆಳಗಾವಿ,ಬಿ.ಎಂ.ಹೂಗಾರ, ಸುಭಾಷ ಹೂಗಾರ ಬಾಗಲಕೋಟೆ, ರಾಯಚೂರು ಜಿಲ್ಲಾಧ್ಯಕ್ಷ ಈರಣ್ಣ ಹೂಗಾರ,ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಿರವಾರ, ಸಿಂಧನೂರಿನ ಜಿಲ್ಲಾ ಉಪಾದ್ಯಕ್ಷರು ಹಾಗೂ ರಾಜ್ಯ ಸಮಿತಿ ಸದಸ್ಯ ಲಿಂಗರಾಜ್ ಹೂಗಾರ, ಅರುಣ ಪೂಜಾರಿ, ನಾಗರಾಜ ಸಂಗೋಳಿಕರ್, ರಮೇಶ ಹೂಗಾರ ಕೊಪ್ಪಳ ಸೇರಿದಂತೆ ಬೆಳಗಾವಿ, ಚಿಕ್ಕೋೋಡಿ, ಅಥಣಿ, ಧಾರವಾಡ, ಗದಗ, ಗುಲ್ಬರ್ಗಾ, ಬಳ್ಳಾಾರಿ , ವಿಜಯಪುರ ಜಿಲ್ಲೆಯ ಸಂಘದ ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲೆಯಿಂದ ರಾಜ್ಯ ಸಮಿತಿಗೆ ಆಯ್ಕೆೆಯಾಗಿದ್ದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿಿತರಿದ್ದರು.
![]() |
![]() |
![]() |
![]() |
![]() |
[ays_poll id=3]