ರಾಯಚೂರಿನಲ್ಲಿ ಶಾಲಾ ಛಾವಣಿ ಕುಸಿದು ವಿದ್ಯಾರ್ಥಿಗೆ ಗಾಯ..

K 2 Kannada News
ರಾಯಚೂರಿನಲ್ಲಿ ಶಾಲಾ ಛಾವಣಿ ಕುಸಿದು ವಿದ್ಯಾರ್ಥಿಗೆ ಗಾಯ..
WhatsApp Group Join Now
Telegram Group Join Now

K2kannadanews.in

student injured ಸಿರವಾರ : ಸರಕಾರಿ ಶಾಲೆ (Government school) ಛಾವಣಿ (Roof) ಕುಸಿದು ವಿದ್ಯಾರ್ಥಿ (student) ತಲೆ, ಕೈಗಳಿಗೆ ಗಾಯಗಳಾಗಿವೆ (Injured). ಪಾತಾಪುರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಛಾವಣಿ ಕುಸಿದಿದೆ.

ರಾಯಚೂರು (Raichur) ಜಿಲ್ಲೆಯ ಸಿರವಾರ (Sirawar) ತಾಲೂಕಿನ ಪಾತಾಪುರ ಗ್ರಾಮದ ಶಾಲೆಯಲ್ಲಿ, ತರಗತಿ (class time) ನಡೆಯುತ್ತಿದ್ದ ವೇಳೆ ಛಾವಣಿ ಕುಸಿದು, ವಿದ್ಯಾರ್ಥಿಗಳ ಮೇಲೆ ಬಿದ್ದಿದ್ದು ಓರ್ವ ವಿದ್ಯಾರ್ಥಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಳೆದ ಎರಡು ಮೂರು (last 3 days) ದಿನಗಳಿಂದ ಸುರಿಯುತ್ತಿರುವ ಮಳೆ (Rain) ಹಿನ್ನೆಲೆ ಘಟನೆ ನಡೆದಿದೆ. ಶಿಥಿಲಾವಸ್ಥೆಯ ಕಟ್ಟಡದಲ್ಲಿ ಜೀವ ಭಯದಲ್ಲಿ ಮಕ್ಕಳು ಪಾಠ (Lesson) ಕಲಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಾನ್ವಿ (manvi) ಕ್ಷೇತ್ರ ಶಿಕ್ಷಣಾಧಿಕಾರಿಗಳು (BEO) ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕೊಠಡಿ ಸೋರುತ್ತಿರುವುದರಿಂದ ತಾತ್ಕಾಲಿಕವಾಗಿ (temporary) ಬೇರೆಡೆ ತರಗತಿ ನಡೆಸಲು ಸೂಚಿಸಿದ್ದಾರೆ. ತಾತ್ಕಾಲಿಕವಾಗಿ ಗ್ರಾಮದ ಕರಿಲಿಂಗೇಶ್ವರ ದೇವಸ್ಥಾನದಲ್ಲಿ (Temple) ತರಗತಿಗಳನ್ನ ನಡೆಸಲಾಗುತ್ತಿದೆ.

WhatsApp Group Join Now
Telegram Group Join Now
Share This Article