K2kannadanews.in
Crime News ರಾಯಚೂರು : ಬುಲೆರೋ ಪಿಕಪ್ ವಾಹನದಲ್ಲಿ ಅಕ್ರಮ ಪಡಿತರ ಹಾಕಿ ಸಾಗಿಸುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ಮಾಡಿ ಪೋಷಕ ಪಡೆದ ಘಟನೆ ನಡೆದಿದೆ. ಈ ವೇಳೆ ಆಘಾತಕಾರಿ ವಿಷಯ ಒಂದು ಬೆಳಕಿಗೆ ಬಂದಿದೆ. ಇನ್ನು ಮುಂದೆ ನೀವು ವಾಹನ ನಿಲ್ಲಿಸುವಾಗ ಕೊಂಚ ಎಚ್ಚರಿಕೆಯಿಂದ ಇರಬೇಕು.
ರಾಯಚೂರು ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆದಿರುವ ಪಡಿತರ ಅಕ್ಕಿ ಅಕ್ರಮ ದಂಧೆಗೆ ಮತ್ತಷ್ಟು ಶಕ್ತಿ ತುಂಬಿಕೊಂಡಿದ್ದಾರೆ. ಅಕ್ರಮ ಸಾಗಣೆ ವೇಳೆ ಯಾರಾದ್ರೂ ತಡೆದ್ರೆ ದಾಳಿ ಮಾಡಲು ರಾಡು, ಕಾರದಪುಡಿ ಬಳಕೆ ಮಾಡಲಾಗುತ್ತಿದೆ ಎಂಬ ಭಯಾನಕ ಸತ್ಯ ಒಂದು ಬೆಳಕಿಗೆ ಬಂದಿದೆ. ಗ್ರಾಮಸ್ಥರ ಮಾಹಿತಿ ಮೇರೆಗೆ ರಾಯಚೂರು ತಾಲೂಕಿನ ಪತ್ತೆಪೂರದಲ್ಲಿ ಆಹಾರ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳಿಂದ ದಾಳಿ, ಬುಲೆರೋ ಪಿಕ್ ಅಪ್ ವಾಹನದಲ್ಲಿ ಸಾಗಿಸುತ್ತಿದ್ದ 20 ಕ್ವಿಂಟಾಲ್ ಅಕ್ರಮ ಪಡಿತರ ಅಕ್ಕಿ ಜಪ್ತಿ ಮಾಡಿದ್ದಾರೆ.
ಈ ದಾಳಿ ವೇಳೆ ವಾಹನ ಬಿಟ್ಟು ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ದೇವದುರ್ಗದ ಜಾಲಹಳ್ಳಿಯಿಂದ ರಾಯಚೂರು ನಗರಕ್ಕೆ ಅಕ್ರಮವಾಗಿ ಅಕ್ಕಿ ಸಾಗಣೆ ಮಾಡಲಾಗುತ್ತಿತ್ತು. ಗ್ರಾಮೀಣ ಭಾಗದಲ್ಲಿ ಪಡಿತರ ಅಕ್ಕಿ ಕಡಿಮೆ ಬೆಲೆಗೆ ಕೊಂಡು ರೈಸ್ ಮಿಲ್‌ಗಳಿಗೆ ಮಾರಾಟ ಮಾಡುವ ದಂಧೆ ಇದಾಗಿದ್ದು, ರಾಯಚೂರು ಆಹಾರ ನಿರೀಕ್ಷಕ ಖಲೀಲ್ ನೇತೃತ್ವದಲ್ಲಿ ದಾಳಿ. ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇನ್ನು ವಾಹನದಲ್ಲಿ ರಾಡು, ಕಾರದಪುಡಿ ಇಟ್ಟುಕೊಂಡಿದ್ದು ಪೊಲೀಸ್ ಮತ್ತು ಅಧಿಕಾರಿಗಳನ್ನು ದಿಗ್ರಾಂತರನ್ನಾಗಿಸಿತ್ತು.