
ಲಿಂಗಸುಗೂರು : ಒಂದು ಪಹಣಿ ತಿದ್ದುಪಡಿ ಮಾಡಬೇಕಂದ್ರೆ ಅಲ್ಲಿನ ಲೆಕ್ಕಾಧಿಕಾರಿಗಳಿಗೆ 5000 ಕೊಡಲೇಬೇಕು, ಕಡಿಮೆ ಏನಾದರೂ ಕೊಟ್ರೆ ನನಗೆ ಕುಡಿಯೋದಿಲ್ಲ ಇನ್ನ ಮೇಲಾಧಿಕಾರಿಗಳಿಗೆ ಏನು ಕೊಡಬೇಕು ಅಂತ ಮೂರು ಬಿಟ್ಟು ಬಹಿರಂಗವಾಗಿಯೇ ರೈತರಿಂದ ಹಣ ಪಡೆಯುತ್ತಾರೆ. ಅರೆ ಎಲ್ಲಪ್ಪ ಇದು ಅಂತೀರಾ ಈ ಸ್ಟೋರಿ ನೋಡಿ.
ಒಂದು ಪಹಣಿ ತಿದ್ದುಪಡಿಗೆ ಕೊಡಬೇಕು 6000..
ರಾಯಚೂರು ಜಿಲ್ಲೆಯಲ್ಲಿ ಮಿತಿಮೀರಿ ಹೋಗಿದೆ ಲಂಚಾವತಾರ, ಪಂಚಾಯತ್ ಗ್ರಾಮೀಣಾಭಿವೃದ್ಧಿ ಇಲಾಖೆ ಆಯ್ತು, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ , ಸಬ್ ರಿಜಿಸ್ಟ್ರಾರ್ ಕಛೇರಿ ಆಯ್ತು, ಇದೀಗ ಕಂದಾಯ ಇಲಾಖೆಯ ಸರದಿ. ಜಿಲ್ಲೆಯಲ್ಲಿ ರೈತರ ರಕ್ತ ಹೀರುತ್ತಿದ್ದಾರೆ ಕಂದಾಯ ಇಲಾಖೆ ಅಧಿಕಾರಿಗಳು, 1 ಪಹಣಿ ತಿದ್ದುಪಡಿ ಮಾಡಿಸಬೇಕು ಅಂದ್ರೆ ಕಡ್ಡಾಯವಾಗಿ ಕೊಡಬೇಕಂತೆ 6000. ಹೀಗೆ ಫಿಕ್ಸ್ ಮಾಡಿದ ಹಣವನ್ನ, ಬಹಿರಂಗವಾಗಿ ರೈತರ ಬಳಿ ಹಣ ತೆಗೆದುಕೊಳ್ಳುತ್ತಿದ್ದಾರೆ ವಿಲೇಜ್ ಅಕೌಂಟೆಂಟ್ಸ್.
ಹೌದು ಲಿಂಗಸಗೂರು ಮುದಗಲ್ ಭಾಗದ ಗ್ರಾಮಲೆಕ್ಕಿಗ ಶರಣಗೌಡನಿಂದ ರೈತರ ಬಳಿ ಲಂಚ ಸ್ವೀಕಾರ. ಹೊಟೆಲ್ ನಲ್ಲಿ ಕೂತು ರೈತರ ಬಳಿ 1 ಪಹಣಿ ತಿದ್ದುಪಡಿಗೆ 5000 ತೆಗೆದುಕೊಂಡಿರುವ ವಿಡಿಯೋ. ನಾಲ್ವರು ಅಣ್ಣ ತಮ್ಮಂದಿರ ಹೆಸರಿಗೆ ಜಮೀನಿನ ಪಹಣಿ ತಿದ್ದುಪಡಿಗೆ ಹಣ ವಸೂಲಿ ಮಾಡ್ತಿದ್ದಾರೆ. ಒಬ್ಬರಿಗೆ 5000 ದಂತೆ ಒಟ್ಟು ನಾಲ್ವರಿಂದ 20,000 ಲಂಚ ವಸೂಲಿ. 5000 ಕ್ಕಿಂತ ಕಡಿಮೆ ಹಣ ಕೊಟ್ಟಿದ್ದಕ್ಕಾಗಿ ಸಾಲೋದಿಲ್ಲ, ಇದರಲ್ಲಿ ನನಗೆ ಏನೂ ಉಳಿಯೋದಿಲ್ಲ ಎನ್ನುವ VA ಶರಣಗೌಡ. ಹಾಗಾದ್ರೆ ಮೇಲಾಧಿಕಾರಿಗಳಿಗೂ ಹೋಗುತ್ತಾ ಲಂಚದ ಪಾಲು ಅನ್ನೋದೇ ತಿಳಿಯಬೇಕಿದೆ. ಫಿಕ್ಸ್ ಮಾಡಿದ ಹಣವನ್ನ ಬಹಿರಂಗವಾಗಿಯೇ ರೈತರ ಬಳಿ ಹಣ ಪೀಕುತ್ತಿದ್ದಾರೆ ಅಧಿಕಾರಿಗಳು. ಏನಾದ್ರು ಮೇಲಾಧಿಕಾರಿಗಳು ಇತ್ತ ಗಮನಹರಿಸಿ ಭ್ರಷ್ಟಾಚಾರ ತಡೆಯುವ ಕೆಲಸಕ್ಕೆ ಮುಂದಾಗುತ್ತಾರಾ ಕಾದು ನೋಡಬೇಕಿದೆ.
![]() |
![]() |
![]() |
![]() |
![]() |
[ays_poll id=3]