ಮಳೆರಾಯನ ಆರ್ಭಟ ಮನೆಗೆ ನುಗ್ಗಿದ ನೀರು : ನಿವಾಸಿಗಳ ಪರದಾಟ..

K 2 Kannada News
ಮಳೆರಾಯನ ಆರ್ಭಟ ಮನೆಗೆ ನುಗ್ಗಿದ ನೀರು : ನಿವಾಸಿಗಳ ಪರದಾಟ..
Oplus_131072
WhatsApp Group Join Now
Telegram Group Join Now

K2kannadanews.in

Heavy rain ರಾಯಚೂರು : ಮಳೆರಾಯನ ಆರ್ಭಟಕ್ಕೆ ರಾಯಚೂರು ನಗರ (City) ನಿವಾಸಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿ, ಇಡೀ ರಾತ್ರಿ ನಿದ್ದೆಗೆಟ್ಟು ನೀರಿನಲ್ಲಿ ಕಾಲ ಕಳೆದ ಘಟನೆ ನಡೆದಿದೆ.

ಹೌದು ರಾಯಚೂರು (Raichur) ಜಿಲ್ಲೆಯಾದ್ಯಂತ ನಿನ್ನೆ ಸಂಜೆ (evening) 6 ಗಂಟೆಯಿಂದ ಮಧ್ಯರಾತ್ರಿ (Midnight) 12 ಗಂಟೆಯವರೆಗೆ ಮಳೆರಾಯನ (Heavy rain) ಆರ್ಭಟ ಜೋರಾಗಿತ್ತು. ಗುಡುಗು, ಮಿಂಚು ಸಹಿತ ಸುರಿದ ಭಾರಿ ಮಳೆಯಿಂದಾಗಿ ನಗರದ ಕೆಲ ಪ್ರದೇಶದ ಮನೆಗಳಿಗೆ (House) ನೀರು ನುಗ್ಗಿದೆ. ಮನೆಯೊಳಗೆ ಸುಮಾರು ಎರಡು ಮೂರು ಅಡಿಯಷ್ಟು ನೀರು ಬಂದಿದ್ದು ಮನೆಯಲ್ಲಿನ ಸಾಮಗ್ರಿಗಳು (material’s) ಸೇರಿದಂತೆ ಆಹಾರ ಧಾನ್ಯಗಳು (Food items) ನೀರು ಪಾಲಾಗಿವೆ.

ಮನೆ ಬಿಟ್ಟು ಹೊರ ಬಂದರೆ ಮಳೆ, ಮನೆಯಲ್ಲೇ ಮಲಗಬೇಕು ಎಂದರೆ ಮನೆ ತುಂಬಾ ನೀರು, ಮಕ್ಕಳಿಂದ (Children) ಹಿಡಿದು ವಯಸ್ಕರವರೆಗೂ ರಾತ್ರಿ ಇಡೀ ನೀರಿನಲ್ಲಿ ಕಾಲ ಕಳೆದಿದ್ದಾರೆ (Time spent in water). ಮಳೆ ನಿಂತ ಮೇಲೆ ಇಡೀ ರಾತ್ರಿ ಮನೆಯಲ್ಲಿನ ನೀರು ಹೊರ ಹಾಕುವುದೇ ಒಂದು ಕೆಲಸವಾಗಿತ್ತು. ರಾಜ ಕಾಲವೆ ಪಕ್ಕದಲ್ಲೆ ಇದ್ದರು ಸ್ವಚ್ಛಗೊಳಿಸದ ಹಿನ್ನೆಲೆ ಕಸ ಕಡ್ಡಿ ತುಂಬಿಕೊಂಡು ನೀರು ಹೋಗದ ಕಾರಣ ಮನೆಗಳಿಗೆ ನೀರು ನುಗುತ್ತಿವೆ ಎಂಬುದು ಸ್ಥಳೀಯರ ಅಸಮಾಧಾನವಾಗಿದೆ.

WhatsApp Group Join Now
Telegram Group Join Now
Share This Article