This is the title of the web page
This is the title of the web page
Local News

ಕುಡಿಯುವ ನೀರು ಸರಬರಾಜು ಘಟಕ್ಕೆ ನಿವಾಸಿಗಳು ಮುತ್ತಿಗೆ..


ರಾಯಚೂರು : ನಗರದ ಹೈದರಾಬಾದ್ ರಸ್ತೆಯಲ್ಲಿ ಇರುವ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ನೀರು ಸರಬರಾಜು ಘಟಕದ ಮೇಲೆ ಐಪಿ ಪಂಪ್ ಸೆಟಗಳು ಹಾಳಿಗಿವೆ ಎಂದು ನೆಪ ಒಡ್ಡಿ ಕಳದ ವಾರದಿಂದ ಕುಡಿಯುವ ನೀರು ಬಿಡದೆ ನಗರ ಸಭೆ ಅಧಿಕಾರಿಗಳು ಬೆಜವಾಬ್ದಾರಿ ವರ್ತನೆ ಮಾಡುತಿದ್ದಾರೆ ಎಂದು ಜನರು ಅಕ್ರೋಶ ವ್ಯಕ್ತಿ ಪಡಿಸಿ ನಿವಾಸಿಗಳು ಮುತ್ತಿಗೆ ಹಾಕಿದ ಘಟನೆ ನಡೆದಿದೆ.

 

ನಗರದ LBS ನಗರ್, ಗಂಜ್ ಎರಿಯಾ, ಮಡ್ಡಿಪೇಟ, ಸಿಯಾತಲಾಬ್, ಅಂದ್ರೂನ್ ಕಿಲ್ಲಾ, ಬೇರೂನ್ ಕಿಲ್ಲಾ, ಮಕ್ತಲ್ ಪೇಟೆ, ಬೆಸ್ತವಾರಪೇಟ, ಲೋಹರ ವಾಡಿಗಳಲ್ಲಿ ನೀರು ಬಾರದೆ ಜನರು ಪರದಾಡುತ್ತಿದ್ದಾರೆ. ಐಪಿ ಪಂಪ್ ಸೆಟ್ ಕಲಸ ಮಾಡುವ ಮೇಸ್ತ್ರಿ ಉಸೆನಪ್ಪ ಮೆಟಾರುಗಳು ಬಂದ್ ಮಾಡಿ ನೀರು ಬರದಂತೆ ಮಾಡುತ್ತಾರೆ. ಕುಡಿಯುವ ನೀರು ಜನರಿಗೆ ಕೋಡುತ್ತಿಲ್ಲ ಎಂದು ಸುಮಾರು ಮೂರು ಗಂಟೆಗಳ ಕಾಲ ಜನರಿಂದ ಘಟಕದ ಮುಂಭಾಗದಲ್ಲಿ ದರಣಿ ನಡೆಸಿದರು. ಈ ಸಂದರ್ಭದಲ್ಲಿ ನಗರ ಸಭಯ ಕಿರಿಯ ಅಭಿಯಂತರರು ನವೀನ್ ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಿ, ಮೋಟಾರುಗಳು ಕೇಬಲ್ಗಳನ್ನು ಅಳವಡಿಸಲಾಯಿತು. ಜನರಿಗೆ ನೀರನ್ನುಡುವಂತೆ ಸಿಬ್ಬಂದಿಗಳಿಗೆ ತಾಕತ್ತು ಮಾಡಿದರು.

 

ಇನ್ನು ಜನ ಘಟಕದ ಮುಂದೆ ಪ್ರತಿಭಟನೆ ಮಾಡುತ್ತಿದ್ದರು. ಈ ವೇಳೆ ಕೆಲ ಜನರು ನಗರ ಸಭೆ ಎಇಇ ಶರಣಪ್ಪ ಅವರಿಗೆ ಈವಿಷಯದ ಬಗ್ಗೆ ಕರೆ ಮಾಡಿ ಮಾಹಿತಿ ಕೇಳಿದರೆ ನಿರ್ಲಕ್ಷ್ಯದಿಂದ ಮಾತನಾಡಿದ್ದು ಅಲ್ಲದೆ, ನನ್ನ‌ ಕೈಯಲ್ಲಿ ಎನು ಇಲ್ಲ, ನಾನು ಏನು ಮಾಡಲು ಆಗುವುದಿಲ್ಲ ಎಂದು ಉತ್ತರ‌ ನೀಡುತ್ತಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.


[ays_poll id=3]