This is the title of the web page
This is the title of the web page
Local News

ಅಲ್ಪಸಂಖ್ಯಾತರ ಮೀಸಲಾತಿ ರದ್ದು ಖಂಡನೀಯ


ರಾಯಚೂರು : ರಾಜ್ಯದಲ್ಲಿ ಸುಮಾರು 14.2ರಷ್ಟು ಜನಸಂಖ್ಯೆಯನ್ನು ಹೊಂದಿರುವ ಮುಸ್ಲಿಂ ಅಲ್ಪಸಂಖ್ಯಾತರು ರಾಜ್ಯದಲ್ಲಿ ಜಾರಿಯಲ್ಲಿರುವ ಹಿಂದುಳಿದ ವರ್ಗಗಳ ಮೀಸಲಾತಿಯಂತೆ 2ಬಿ ಕ್ಯಾಟೆಗಾರಿಯಲ್ಲಿ ಶೇ 4ರಷ್ಟು ಮೀಸಲಾತಿಯನ್ನು 1995ರಲ್ಲಿ ನೀಡಲಾಗಿತ್ತು, ಆದರೆ ನಿನ್ನೆ ನಡೆದ ಸಚಿವ ಸಂಪುಟ ಸಭೆಯ ನಿರ್ಣಯದಂತೆ ಮುಸ್ಲಿಂರಿಗಿರುವ ಶೇ 4ರ ಮೀಸಲಾತಿಯನ್ನು ರದ್ದುಪಡಿಸಿರುವುದು ಖಂಡನೀಯ ಕೂಡಲೇ ಈ ನಿರ್ಣಯವನ್ನು ವಾಪಸ್ ಪಡೆಯಬೇಕು ಎಂದು ಅಂಜುಮನ್ – ಎ – ರಾಯಚೂರು ಸಂಚಾಲಕ ರಝಾಕ್ ಉಸ್ತಾದ್ ಹೇಳಿದರು.

ಸರಕಾರದ ನಿರ್ಣಯವು ಬಡ ಮುಸ್ಲಿಂರ ಬೆಳವಣಿಗೆಗೆ ಅಡ್ಡಿಯಾಗಿದೆಯಲ್ಲದೇ ಭವಿಷ್ಯವು ಮಂಕಾಗುವಂತೆ ಮಾಡಿದೆ. ಈ ನಿರ್ಣಯ ಕೈಗೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅತ್ಯಂತ ಅಮಾನವೀಯ, ಸಂವೇಧನಶೀಲತೆ ಇರದ, ದುರ್ಬಲ ಮುಖ್ಯಮಂತ್ರಿಯೆಂದು ಇತಿಹಾಸದಲ್ಲಿ ದಾಖಲಾಗಲಿದೆ ಎಂದರು. ದೇಶದಲ್ಲಿ 2011ರ ಜನಗಣತಿಯಂತೆ 13.8 ರಷ್ಟು ಜನಸಂಖ್ಯೆಯನ್ನು ಹೊಂದಿರುವ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯವು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದರುವ ಬಗ್ಗೆ ಕೇಂದ್ರ ಸರಕಾರಗಳು ರಚಿಸಿದ ಹಲವು ಸಮಿತಿಗಳು ವಿವರವಾದ ವರದಿಗಳನ್ನು ನೀಡಲಾಗಿದೆ, ಅದರಲ್ಲಿ ವಿಶೇಷವಾಗಿ ನ್ಯಾ.ರಾಜೇಂದ್ರ ಸಾಚಾರ ಸಮಿತಿ ಹಾಗೂ ನ್ಯಾ.ರಂಗನಾಥ ಮಿಶ್ರಾ ಆಯೋಗ ನೀಡಿರುವ ವರದಿಗಳು ಪ್ರಮುಖವಾಗಿವೆ, ದೇಶದಲ್ಲಿ ಅತೀ ಕೆಳಮಟ್ಟದ ಜೀವನ ನಡೆಸುತ್ತಿರುವ ಸಮುದಾಯಗಳ ಸಾಲಿನಲ್ಲಿ ಮೊದಲಿಗೆ ನಿಲ್ಲುವದೇ ಮುಸ್ಲಿಂ ಸಮುದಾಯವಾಗಿದೆ, ಅಲ್ಲದೇ ಶೈಕ್ಷಣಿಕವಾಗಿ ಅತೀ ಕಡಿಮೆ ಸಾಕ್ಷರತೆ ಹೊಂದಿರುವದು ಮತ್ತು ಶಾಲೆ ಬಿಡುವ ಮಕ್ಕಳ ಸಂಖ್ಯೆ ಅತಿ ಹೆಚ್ಚು ಇದೇ ಸಮುದಾಯದಿಂದ ಇರುವದು ವರದಿಯಾಗಿದೆ.

ಸರಕಾರ ಈಗ ತೆಗೆದುಕೊಂಡಿರುವ ಮೀಸಲಾತಿ ರದ್ದತಿ ನಿರ್ಣಯವು ದ್ವೇಶದಿಂದ ಕೂಡಿದ್ದು, ಈ ಸಮುದಾಯ ಬಿಜೆಪಿ ಪಕ್ಷಕ್ಕೆ ಮತದಾನ ಮಾಡುವದಿಲ್ಲ ಎನ್ನುವ ಏಕೈಕ ಕಾರಣದಿಂದ ಮಾಡಲಾಗಿದೆ ಎನ್ನುವದು ಸ್ಪಷ್ಟವಾಗಿದೆ, ಈಗಾಗಲೇ ಈ ಸಮುದಾಯ ಏನನ್ನು ತಿನ್ನಬೇಕು, ಯಾವ ಬಟ್ಟೆಯನ್ನು ಧರಿಸಬೇಕು, ಎಲ್ಲಿ ವ್ಯಾಪಾರ ಮಾಡಬೇಕು ಇತ್ಯಾದಿ ವಿಷಯಗಳನ್ನು ಮುನ್ನಲೆಗೆ ತಂದು ನಮ್ಮನ್ನು ನಿಯಂತ್ರಿಸಲು ಪ್ರಯತನಿಸಿರುವದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ, ಅದರಂತೆ ಇನ್ನು ಮುಂದೆ ಮುಸ್ಲಿಂ ಸಮುದಾಯ ಸರಳವಾಗಿ ಶಿಕ್ಷಣ ಪಡೆಯಬಾರದು ಮತ್ತು ಸರಳವಾಗಿ ಸರಕಾರಿ ಸೇವೆಗೆ ಸೇರಬಾರದೆನ್ನುವ ಏಕೈಕ ಉದ್ದೇಶದಿಂದ ಈ ನಿರ್ಣಯ ಕೈಗೊಂಡಿರುವದು ಸರ್ವಾಧಿಕಾರಿ ಧೋರಣೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.


[ays_poll id=3]