This is the title of the web page
This is the title of the web page
Local News

ಖಾಸಗಿ ವಾಹನ ಮತ್ತು ಟ್ಯಾಕ್ಸಿ ವಾಹನ ಚಾಲಕರ ಬೇಡಿಕೆ ಈಡೇರಿಸಲು ಮನವಿ


ರಾಯಚೂರು : ಖಾಸಗಿ ವಾಹನ ಮತ್ತು ಟ್ಯಾಕ್ಸಿ ವಾಹನ ಚಾಲಕರಿಗೆ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಖಾಸಗಿ ಮತ್ತು ಟ್ಯಾಕ್ಸಿ ವಾಹನ ಚಾಲಕರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಜಿಲ್ಲೆಯಲ್ಲಿ ಸುಮಾರು 13 ಸಾವಿರ ಕ್ಕೂ ಅಧಿಕ ಖಾಸಗಿ ಮತ್ತು ಟ್ಯಾಕ್ಸಿ ವಾಹನ ಚಾಲಕರಿದ್ದಾರೆ, ನಗರದಲ್ಲಿ 700 ಜನ ಚಾಲಕರು ಕಾರ್ಯನಿರ್ವಹಿಸುತ್ತಿದ್ದಾರೆ. ಕಡಿಮೆ ವೇತನದಿಂದ ಜೀವನ ನಡೆಸಲು ಸಾದ್ಯವಾಗದೇ ಆರ್ಥಿಕವಾಗಿ ದುರ್ಬಲರಾಗಿದ್ದು ಶೀಘ್ರದಲ್ಲಿ ವೇತನ ಹೆಚ್ಚಳ ಮಾಡುವಂತೆ ಒತ್ತಾಯಿಸಿದರು. ಮೂಲತಃ ಶ್ರಮ ಜೀವಿಗಳಾದ ನಾವು ಉಪವಾಸ ವನವಾಸ ಅನುಭವಿಸುತ್ತಾ ಕಷ್ಟದ ಜೀವನ ದೂಡುತ್ತಿದ್ದೇವೆ. ನಮ್ಮ ಸಂಗಾತಿಗಳಲ್ಲಿ ರೈಸ್ ಮಿಲ್, ಕಾಸಿನ್ ಫ್ಯಾಕ್ಟರಿ, ಡಾಕ್ಟರ್ ವಾಹನಗಳ ನಡೆಸುವವರು, ಶಾಲಾ ಕಾಲೇಜುಗಳ ಬಸ್ಸುಗಳು ನಡೆಸುವವರು ಇತ್ಯಾದಿ ಕೆಲಸ ಮಾಡುತ್ತಿದ್ದೇವೆ.

ಅಲ್ಲದೆ ಟ್ಯಾಕ್ಸಿ, ವಾಹನಗಳು ಚಲಾವಣೆ ಮಾಡುವವರು ಜಿಲ್ಲೆಯಲ್ಲಿ 1000 ಕ್ಕೂ ಹೆಚ್ಚು ಜನರಿದ್ದಾರೆ. ಆದರೆ ಇವರಿಗೆ ಯಾವುದೇ ಸರಕಾರಿ ಯೋಜನೆ ರೂಪಿಸಿಲ್ಲ, ಆರ್ಥಿಕವಾಗಿ ದುರ್ಬಲರಾಗಿದ್ದಾರೆ ಎಂದು ದೂರಿದರು. ಪ್ರಸ್ತುತ ದಿನಮಾನಗಳಲ್ಲಿ ಆಗತ್ಯ ವಸ್ತುಗಳು ದುಬಾರಿಯಾಗುತ್ತಿದ್ದು, ಮಕ್ಕಳ ವಿದ್ಯಾಭ್ಯಾಸ, ವೈದ್ಯಕೀಯ ವೆಚ್ಚ, ಬಾಡಿಗೆ ಮನೆಗಳಲ್ಲಿ ವಾಸ ಸೇರ ಇಲ್ಲದೆ ಇರುವ ಸಮಸ್ಯೆ ಮುಂತಾದ ಮೇಲೆ ತಿಳಿಸಲಾದ ಎರಡೂ ಗುಂಪಿನ ವಾಹನ ಚಾಲಕರು ಅನುಭವಿಸುತ್ತಿದ್ದಾರೆ ಹಾಗಾಗಿ ಸರ್ಕಾರ ನೆರವಿಗೆ ಬರಲು ಮನವಿ ಮಾಡಿದರು.


[ays_poll id=3]